Connect with us

    DAKSHINA KANNADA

    ಪ್ರಿಯಕರನನ್ನ ನೋಡಲು ಫ್ರೀ ಬಸ್ ಹತ್ತಿ‌ ಪುತ್ತೂರಿಗೆ ಬಂದ ಪ್ರಿಯತಮೆ, ಪ್ರಿಯಕರನೊಂದಿಗೆ ನಾಪತ್ತೆ!

    ಪುತ್ತೂರು, ಜೂನ್ 14: ಸರ್ಕಾರದ ಶಕ್ತಿ ಯೋಜನೆಯಲ್ಲಿ ಪ್ರಿಯಕರನನ್ನು ನೋಡಲು ಬಂದ ಪ್ರಿಯತಮೆ ಹುಬ್ಬಳಿಯಿಂದ ಪುತ್ತೂರಿಗೆ ಬಂದು ಪ್ರಿಯಕರನೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.

    11 ತಿಂಗಳ ಮಗವನ್ನು ಬಿಟ್ಟು ಪ್ರಿಯಕರನನ್ನ ನೋಡಲು ವಿವಾಹಿತೆ ಪುತ್ತೂರಿಗೆ ಬಂದಿದ್ದಾಳೆ. ಈ ಹಿಂದೆಯೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು, ಆದರೆ ಯುವತಿಗೆ ಬೇರೆ ಯುವಕನ ಜೊತೆ ಮದುವೆಯಾಗಿದ್ದು, ಮದುವೆಯಾದ ಬಳಿಕವೂ ತನ್ನ ಪ್ರಿಯಕರನ‌ ಜೊತೆ ಒಡನಾಟದಲ್ಲಿದ್ದಳು ಎನ್ನಲಾಗಿದೆ.

    ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದು, ಗಂಡನಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಮನೆಯಿಂದ ಮಹಿಳೆ ಎಸ್ಕೇಪ್ ಆಗಿದ್ದಾರೆ, ಆಧಾರ್ ಕಾರ್ಡ್ ಬಳಸಿ ಬಸ್ಸಿನಲ್ಲಿ ಫ್ರೀಯಾಗಿ‌ ಪ್ರಯಾಣಿಸಿದ್ದಾಳೆ. ಈ ಘಟನೆ ತಿಳಿದ ಎರಡೂ ಮನೆಯವರು ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ ಮಾಡಿದ್ದಾರೆ.

    ಇವರಿಬ್ಬರನ್ನ ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ದೈರ್ಯ ಹೇಳಿದ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್, ಪುತ್ತೂರಿಗೆ ಬಂದು ಪ್ರಿಯಕರನ ಜೊತೆ ಪರಾರಿಯಾದ ಮಹಿಳೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಬಗ್ಗೆ ಮಾಹಿತಿ ತಿಳಿದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply