FILM
15 ವರ್ಷದ ದಾಂಪತ್ಯಕ್ಕೆ ಪುಲ್ ಸ್ಟಾಪ್ ಇಟ್ಟ ತಮಿಳು ನಟ ಜಯಂ ರವಿ
ಚೆನ್ನೈ ಸೆಪ್ಟೆಂಬರ್ 09: ತಮಿಳು ಸಿನೆಮಾರಂಗದಲ್ಲಿ ಇದೀಗ ಮತ್ತೊಂದು ಡೈವೋರ್ಸ್ ಸುದ್ದಿ ಬಂದಿದ್ದು, ಖ್ಯಾತ ನಟ ಜಯಂ ರವಿ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಪುಲ್ ಸ್ಟಾಪ್ ಇಟ್ಟಿದ್ದಾರೆ. ನಟ ಜಯಂ ರವಿ ಅವರು ಪತ್ನಿ ಆರತಿ ಜೊತೆಗಿನ ವೈವಾಹಿಕ ಜೀವನದಿಂದ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ನಟ ಜಯಂ ರವಿ ತಮಿಳು ಚಿತ್ರರಂಗದ ಪ್ರಮುಖ ತಾರೆ. ಜಯಂ ರವಿ ಪ್ರಸಿದ್ಧ ನಿರ್ಮಾಪಕ ಮತ್ತು ಚಿತ್ರಕಥೆಗಾರ ಮೋಹನ್ ಅವರ ಮಗ. ಅವರು ತಮ್ಮ ಸಹೋದರ ಮೋಹನ್ ರಾಜ ನಿರ್ದೇಶನದ ಜಯಂ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕರಾಗಿ ಪಾದಾರ್ಪಣೆ ಮಾಡಿದರು. ಸಂಥಿಂಗ್ ಸಮ್‌ಥಿಂಗ್, ಸಂತೋಷ್ ಸುಬ್ರಮಣ್ಯಂ, ದೀಪಾವಳಿ, ಪೊನ್ನಿನ್ ಸೆಲ್ವನ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಮುಂಬರುವ ಚಿತ್ರ ಬ್ರದರ್ ಬಿಡುಗಡೆಯಾಗಲಿದೆ.
ಜಯಂ ರವಿ ಮತ್ತು ಅವರ ಪತ್ನಿ ಅರತಿ ಜೊತೆ 2009 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಕೆಲ ತಿಂಗಳಿಂದ ಜಯಂ ರವಿ ಹಾಗೂ ಆರತಿಗೆ ಸಂಬಂಧಿಸಿದ ನಾನಾ ಮಾಹಿತಿಗಳು ಹೊರ ಬರುತ್ತಿವೆ. ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವಿಚ್ಛೇದನ ಪಡೆಯುವ ಹಂತದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೀಗ ತಾವು ವಿಚ್ಚೇದನ ಪಡೆಯುತ್ತಿರುವದಾಗಿ ನಟ ಜಯಂ ರವಿ ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪೊಸ್ಟ್ ಮಾಡಿ, ಬಹಳಷ್ಟು ಚರ್ಚೆ ಹಾಗೂ ಯೋಚನೆಗಳ ಬಳಿಕ ನಾನು ಆರತಿಯೊಂದಿಗೆ ವಿವಾಹ ವಿಚ್ಚೇದನ ಪಡೆಯುತ್ತಿದ್ದೆನೆ ಎಂದಿದ್ದಾರೆ.
You must be logged in to post a comment Login