LATEST NEWS
ಬ್ರಹ್ಮಾವರ – ನಾಪತ್ತೆಯಾಗಿದ್ದ ಬಾಲಕ ಕೇರಳ ಪಾಲ್ಗಾಟ್ ರೈಲ್ವೆ ಸ್ಟೇಷನ್ ನಲ್ಲಿ ಪತ್ತೆ
ಉಡುಪಿ ಸೆಪ್ಟೆಂಬರ್ 09: ಕೋಚಿಂಗ್ ಸೆಂಟರ್ ಗೆ ಹೋಗುತ್ತೆನೆ ಎಂದು ಹೇಳಿ ಹೋಗಿದ್ದ ಬಾಲಕ ಮನೆಗೆ ವಾಪಾಸ್ ಬಾರದೆ ನಾಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬಾಲಕ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.
ನಾಪತ್ತೆಯಾದ ಬಾಲಕನನ್ನು ಬ್ರಹ್ಮಾವರ ಹಂದಾಡಿ ಬಾರಕೂರು ರಸ್ತೆಯ ನಿವಾಸಿ ಪ್ರಕಾಶ್ ಎಂಬವರ ಪುತ್ರ ಆರ್ಯ(13) ಎಂದು ಗುರುತಿಸಲಾಗಿದೆ. ರವಿವಾರ ಬೆಳಗ್ಗೆ ಉಡುಪಿ ಕಡಿಯಾಳಿಯಲ್ಲಿರುವ ಆಕಾಶ್ ಕೋಚಿಂಗ್ ಇನ್ ಸ್ಟಿಟ್ಯೂಟ್ ಗೆಂದು ಹೋಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಆರ್ಯ, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದನು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರ್ಯ, ಇಂದ್ರಾಳಿ ರೈಲು ನಿಲ್ದಾಣದಿಂದ ರೈಲಿನ ಮೂಲಕ ಕೇರಳದ ಕಡೆ ತೆರಳಿರುವುದು ಕಂಡುಬಂತು. ಅತ್ತ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರ್ಯನನ್ನು ಪಾಲ್ಘಾಟ್ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ತಿಳಿದ ಉಡುಪಿ ಪೊಲೀಸರು ಪಾಲ್ಘಾಟ್ ಗೆ ತೆರಳಿದ್ದಾರೆಂದು ತಿಳಿದುಬಂದಿದೆ
You must be logged in to post a comment Login