LATEST NEWS
ದೂರದರ್ಶನ ಉಡುಪಿ ವರದಿಗಾರ ಜಯಕರ ಸುವರ್ಣ ಹೃದಯಾಘಾತದಿಂದ ನಿಧನ
ಉಡುಪಿ ಅಗಸ್ಟ್ 06: ಉಡುಪಿ ಜಿಲ್ಲೆ ದೂರದರ್ಶನ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಕಲ್ಮಾಡಿ ನಿವಾಸಿ ಜಯಕರ ಸುವರ್ಣ (67) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಪಾಧ್ಯಕ್ಷರೂ ಆಗಿದ್ದ ಅವರು ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಲ್ಮಾಡಿ ಮನೆಯಲ್ಲಿ ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ನಡೆಯಲಿದ್ದು, ಇಂದೇ ಅಂತ್ಯಕ್ರಿಯೆ ನಡೆಯಲಿದೆ.
You must be logged in to post a comment Login