LATEST NEWS
ಪೋರಮ್ ಮಾಲ್ ಬಳಿ ಯವತಿ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ – ನಾಲ್ವರು ಯುವಕರು ಅರೆಸ್ಟ್
ಮಂಗಳೂರು ಅಗಸ್ಟ್ 06: ಯುವತಿಯೊಬ್ಬಳ ಮೈಗೆ ಕೈಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಮಂಗಳೂರಿನ ಪಾಂಡೇಶ್ವರದ ಫೋರಮ್ ಮಾಲ್ ನಲ್ಲಿರುವ ಶೆರ್ಲಾಕ್ ಪಬ್ ನಲ್ಲಿ ನಡೆದಿದ್ದು, ಈ ಘಟನೆ ಕುರಿತಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಪುತ್ತೂರು ನೆಹರು ನಗರದ ವಿನಯ(33), ಮಹೇಶ್(27), ಪಡ್ನೂರು ಗ್ರಾಮದ ಪ್ರೀತೇಶ್ (34), ಅದೇ ಪರಿಸರದ ನಿವಾಸಿ ನಿತೇಶ್(33) ಎಂದು ಗುರುತಿಸಲಾಗಿದೆ. ಪೋರಮ್ ಮಾಲ್ ನಲ್ಲಿ ಶೆರ್ಲಾಕ್ ಪಬ್ ಗೆ ಆಗಮಿಸಿದ್ದ ಯುವತಿಯ ಜೊತೆ ಈ ನಾಲ್ವರು ಅಸಭ್ಯವಾಗಿ ವರ್ತಿಸಿದಲ್ಲದೆ ಯುವತಿಯ ಎದೆಯ ಭಾಗಕ್ಕೆ ಕೈಹಾಕಿದ್ದರು ಎನ್ನಲಾಗಿದೆ. ಈ ವೇಳೆ, ತನಗೆ ಮತ್ತು ತನ್ನ ಗೆಳತಿಗೆ ಬೀಯರ್ ಬಾಟಲಿಯಲ್ಲಿ ಹಲ್ಲೆ ಮಾಡುವುದಕ್ಕೂ ಯುವಕರು ಮುಂದಾಗಿದ್ದಾರೆ ಎಂದು 22 ವರ್ಷದ ಯುವತಿ ದೂರು ನೀಡಿದ್ದರು.
ಆಗಸ್ಟ್ 3ರ ಶನಿವಾರ ರಾತ್ರಿ 10.30ರ ವೇಳೆಗೆ ಘಟನೆ ನಡೆದಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 74, 79. 352 ಪ್ರಕಾರ ಕೇಸು ದಾಖಲಾಗಿದೆ.
You must be logged in to post a comment Login