Connect with us

    FILM

    ಗಂಡನೆದುರೇ ಜಾರ್ಖಂಡ್ ನಟಿಯ ಗುಂಡಿಕ್ಕಿ ಹತ್ಯೆ….!!

    ಕೋಲ್ಕತ್ತ ಡಿಸೆಂಬರ್ 28: ಜಾರ್ಖಂಡ್ ನಟಿಯೊಬ್ಬರನ್ನು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ರಾಂಚಿ–ಕೋಲ್ಕತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬುಧವಾರ ಬೆಳಿಗ್ಗೆ 6 ಗಂಟೆಯ ಸುಮಾರು ಹೌರಾ ಜಿಲ್ಲೆಯ ಮಹೀಶ್‌ರೇಖಾ ಸೇತುವೆ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.


    ನಟಿ ರಿಯಾ ಕುಮಾರಿ ಅವರು ತಮ್ಮ ಮೂರು ವರ್ಷದ ಮಗಳು ಹಾಗೂ ಗಂಡ ಪ್ರಕಾಶ್ ಕುಮಾರ್ ಅವರೊಡನೆ ರಾಂಚಿಯಿಂದ ಕೋಲ್ಕತ್ತಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಹೀಶ್‌ರೇಖಾ ಸೇತುವೆ ಬಳಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದಾಗ ಮೂವರು ದುಷ್ಕರ್ಮಿಗಳು ಕಾರಿನಲ್ಲಿದ್ದ ನಟಿ ಮೇಲೆ ದರೋಡೆ ಮಾಡಲು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಈ ವೇಳೆ ದರೋಡೆಕೋರನೊಬ್ಬ ನಟಿಗೆ ಗುಂಡು ಹಾರಿಸಿದ್ದಾನೆ.

    ತೀವ್ರ ರಕ್ತಸ್ರಾವವಾಗಿ ರಿಯಾ ಆಸ್ಪತ್ರೆಗೆ ತೆಗದುಕೊಂಡು ಹೋಗುವ ಮಾರ್ಗದಲ್ಲಿ ಮೃತಪಟ್ಟಳು’ ಎಂದು ರಿಯಾಳ ಗಂಡ ಪ್ರಕಾಶ್ ಕುಮಾರ್ ಪೊಲೀಸರೆದರು ಹೇಳಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆ ಪ್ರಕಾಶ್ ಕುಮಾರ್ ಅವರ ಮೇಲೂ ಹೌರಾ ಪೊಲೀಸರಿಗೆ ಅನುಮಾನ ಮೂಡಿದ್ದು, ಪ್ರಕಾಶ್ ಕುಮಾರ್ ಹೇಳಿಕೆಗಳು ಅನುಮಾನಾಸ್ಪದವಾಗಿವೆ ಎಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರಿಯಾ ಕುಮಾರಿ ಜಾರ್ಖಂಡ್‌ನ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply