Connect with us

    FILM

    ಶಿವಮೊಗ್ಗದಲ್ಲಿ ಬಾಲಿವುಡ್ ಬೆಡಗಿ ಜಾಕಲೀನ್ ಫೆರ್ನಾಂಡಿಸ್

    ಶಿವಮೊಗ್ಗ: ಬಾಲಿವುಡ್ ಹಾಟ್ ಬೆಡಗಿ ಜಾಕಲೀನ್ ಫೆರ್ನಾಂಡಿಸ್ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ತಂಗಿದ್ದ ಅವರು ಅಲ್ಲಿ ಗಾಲ್ಪ್ ಆಟ ಆಡಿದ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ,

    ಬಾಲಿವುಡ್ ನಟಿ ಜಾಕ್​ಲೀನ್ ಫರ್ನಾಂಡೀಸ್, ‘ಕಿಚ್ಚ’ ಸುದೀಪ್ ಜತೆಗೆ ‘ಫ್ಯಾಂಟಮ್ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸುತ್ತಿದ್ದಾರೆ. ಈ ನಡುವೆ ಬಾಲಿವುಡ್ ಬೆಡದಿ ಜಾಕಲೀನ್ ತಮ್ಮ ವಿಶ್ರಾಂತಿ ಸಮಯ ಕಳೆಯಲು ಈ ಬಾರಿ ಮಲೆನಾಡಿನ ಶಿಮಮೊಗ್ಗಕ್ಕೆ ಆಗಮಿಸಿದ್ದಾರೆ.


    ಜನವರಿ 15 ರಂದು ಶಿವಮೊಗ್ಗದ ಐಷಾರಾಮಿ ಗಾಲ್ಫ್‌ ರೆಸಾರ್ಟ್‌ವೊಂದರಲ್ಲಿ ಅವರು ತಂಗಿದ್ದಾರೆ. ಸಿನಿಮಾ ಕೆಲಸಗಳಿಂದ ಒಂದಷ್ಟು ದಿನ ಬಿಡುವು ಪಡೆದು, ಸ್ನೇಹಿತರೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ ಅವರು ಸ್ನೇಹಿತರ ಜತೆಗಿನ ಗಾಲ್ಪ್ ಆಟದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ಬೆಸ್ಟ್ ವೀಕೆಂಡ್ ಎವರ್’ ಎಂದು ಬರೆದುಕೊಂಡಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಾಲಿವುಡ್​ನ ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿರುವ ಜಾಕ್​ಲೀನ್, ಕೆಲವೇ ತಿಂಗಳುಗಳಲ್ಲಿ ‘ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚನ ಜತೆ ಹೆಜ್ಜೆ ಹಾಕಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply