Connect with us

LATEST NEWS

13 ವರ್ಷ ಬಾಲಕಿ ಮೇಲೆ 48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್

ಜಬಲ್ಪುರ್, ಜನವರಿ​ 17:  13 ವರ್ಷದ ಬಾಲಕಿ ಮೇಲೆ ಕೇವಲ 48 ಗಂಟೆಗಳಲ್ಲಿ 9 ಕಾಮುಕರು 13 ಬಾರಿ ಅತ್ಯಾಚಾರ ಎಸಗಿರುವ ಅಮಾನವೀಯವಾಗಿ ಘಟನೆ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ನಡೆದಿದೆ.ಸಂತ್ರಸ್ತ 9ನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ ಬಾಯ್​ಫ್ರೆಂಡ್​ ಎನ್ನಲಾದ ಹುಡುಗನು ತನ್ನ ಸ್ನೇಹಿತನೊಂದಿಗೆ ಸೇರಿ, ಅಪಹರಿಸಿ ಗ್ಯಾಂಗ್​ರೇಪ್​ ಮಾಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಡಾಭಾದಲ್ಲಿ ಮತ್ತೆ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ಟ್ರಕ್​ ಚಾಲಕರನ್ನು ಡ್ರಾಪ್ ಕೇಳಿದಾಗ, ಅವರಿಬ್ಬರು ಸಹ ರೇಪ್​ ಮಾಡಿದ್ದಾರೆ. ಸುಮಾರು 48 ಗಂಟೆಗಳ ಕಾಲ ಸಂತ್ರಸ್ತೆ ನರಕಯಾತನೆ ಅನುಭವಿಸಿದ್ದಾಳೆ. ಸರಿಯಾಗಿ ಮಾತನಾಡಲು ಆಗದಷ್ಟು ಕಾಮುಕರು ವಿಕೃತಿ ಮೆರೆದಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ 13 ವರ್ಷದ ಉಮಾರಿಯಾ ಮೂಲದ ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ಜಬಲ್ಪುರದಲ್ಲಿ ನೆಲೆಸಿದ್ದು, 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ತಂದೆ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿನಿಯನ್ನು ಆಕೆಯ ತಾಯಿ ಉಮಾರಿಯಾಗೆ ಕರೆತಂದಿದ್ದಳು. ಜ.11ರ ಮಧ್ಯಾಹ್ನ ತರಕಾರಿ ತರಲೆಂದು ಮಾರುಕಟ್ಟೆಗೆ ತೆರಳಿದ್ದಾಳೆ. ಈ ವೇಳೆ ರಾಹುಲ್​ ಕುಸ್ವಾಹ ಮತ್ತು ಆಕಾಶ್​ ಸಿಂಗ್ ಎಂಬುವರು ಆಕೆ ಸಿಕ್ಕಿದ್ದಾರೆ. ಇಬ್ಬರು ಆಕೆಯನ್ನು ಶಾಪ್​ ಕರೆದೊಯ್ದಿದ್ದಾರೆ. ಬಳಿಕ ಆಕೆಯಿಂದ ಮೊಬೈಲ್​ ನಂಬರ್ ಸಹ​ ಪಡೆದುಕೊಂಡಿದ್ದಾರೆ. ಬಳಿಕ ಬೈಕ್​ನಲ್ಲಿ ಕರೆದೊಯ್ಯುವುದಾಗಿ ಹೇಳಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ​

ಹುಡುಗರಿಬ್ಬರು ಆಕೆಯನ್ನು ಭರೌಲಾ ಮತ್ತು ಛತನ್ ಪಕ್ಕದ​ ಅರಣ್ಯಕ್ಕೆ ಕರೆದೊಯ್ದು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಎನ್​ಎಸ್​43ನಲ್ಲಿರುವ ಡಾಬಾಗೆ ಕರೆದೊಯ್ದು ರಾತ್ರಿಯೆಲ್ಲ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ರಾಹುಲ್​ ಮತ್ತು ಆಕಾಶ್​ ಹೊರತುಪಡಿಸಿ, ಡಾಬಾ ಆಪರೇಟರ್​ ಪರಾಸ್​ ಸೋನಿ ಮತ್ತು ಸಹೋದ್ಯೋಗಿಗಳಾದ ಮನು ಕಿವಾತ್​, ಒಂಕಾರ್​ ರೈ, ಈತೇಂದ್ರ ಸಿಂಗ್​ ಮತ್ತು ರಾಜನೀಶ್ ಛೌದರಿ ಗ್ಯಾಂಗ್​ರೇಪ್​ ಮಾಡಿದ್ದಾರೆ. ​

ಇದಾದ ಬಳಿಕ ಮಾರನೇ ದಿನ ಆಕಾಶ್​ ಮತ್ತು ರಾಹುಲ್​ cಯನ್ನು ಕರೆದೊಯ್ದು ವಾಪಸ್ಸು ಅರಣ್ಯ ಪ್ರದೇಶದ ಬಳಿ ಬಿಟ್ಟು ಬಂದಿದ್ದಾರೆ. ಎರಡನೇ ದಿನದ ಬೆಳಗ್ಗೆ ಅಂದರೆ ಜ.12ರಂದು ಯುವತಿ ಟ್ರಕ್​ ಚಾಲಕನನ್ನು ಡ್ರಾಪ್​ ಕೇಳಿದ್ದಾಳೆ. ಹತ್ತಿಸಿಕೊಂಡ ಬಳಿಕ ಸ್ವಲ್ಪ ದೂರದ ನಂತರ ಚಾಲಕ ಆಕೆಯ ಮೇಲೆ ರೇಪ್ ಮಾಡಿದ್ದಾನೆ. ಬಳಿಕ ವಿಲಯತ್​ ಕಲಾ ಬರವಾರ ಬಳಿಕ ಟೋಲ್​ ಬಳಿ ವಿದ್ಯಾರ್ಥಿನಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮತ್ತೆ ಇನ್ನೊಂದು ಟ್ರಕ್​ ಬಳಿ ಡ್ರಾಪ್​ ಕೇಳಿದ್ದಾಳೆ. ಅಷ್ಟರಲ್ಲಾಗಲೇ ವಿದ್ಯಾರ್ಥಿನಿ ತುಂಬಾ ಸುಸ್ತಾಗಿದ್ದಳು. ಅದನ್ನು ಲಾಭವಾಗಿ ಮಾಡಿಕೊಂಡ ಚಾಲಕ ತಾನೂ ರೇಪ್​ ಮಾಡಿದ್ದಾನೆ. ಬಳಿಕ ಅಮಾರಿಯಾ ಬಳಿ ಬಿಟ್ಟು ಎಸ್ಕೇಪ್​ ಆಗಿದ್ದಾನೆ.

ಕೊನೆಗೂ ಮನೆಗೂ ತಲುಪಿದ ಸಂತ್ರಸ್ತೆ ನಡೆದ ಘಟನೆಯನ್ನು ಪಾಲಕರ ಮುಂದೆ ವಿವರಿಸಿದ್ದಾಳೆ. ಬಳಿಕ ಪಾಲಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್​ ವರಿಷ್ಠಾಧಿಕಾರಿ ಕ್ರೂರ ಘಟನೆಯಿಂದ ಸಂತ್ರಸ್ತೆ ತುಂಬಾ ಭೀತಿಗೆ ಒಳಗಾಗಿದ್ದಾಳೆ. ಏನು ನಡೆದಿದೆ ಎಂದು ಸರಿಯಾಗಿ ಹೇಳಲು ಆಕೆಗೆ ಸಾಧ್ಯವಾಗುತ್ತಿಲ್ಲ. 9 ಆರೋಪಿಗಳ ವಿರುದ್ಧ ಕೋಟ್ವಾಲಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 376 ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆಕಾಶ್​ ಸಿಂಗ್​, ರಾಹುಲ್​ ಕುಸ್ವಾಹ, ಮನು ಕಿವಾತ್​, ಓಂಕಾರ್​ ರೈ, ರಜನೀಶ್​ ಚೌಧರಿ, ಪರಾಸ್​ ಸೋನಿ ಮತ್ತು ಟ್ರಕ್​ ಡ್ರೈವರ್​, ರೋಹಿತ್​ ಯಾದವ್​ರನ್ನು ಬಂಧಿಸಲಾಗಿದೆ. ಇತೇಂದ್ರ ಮತ್ತು ಇತರೆ ಟ್ರಕ್​ ಡ್ರೈವರ್​ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲ ಆರೋಪಿಗಳು 21 ರಿಂದ 30 ವರ್ಷ ವಯಸ್ಸಿನೊಳಗಿನವರಾಗಿದ್ದಾರೆ. ಟ್ರಕ್​ ಡ್ರೈವರ್​ ರೋಹಿತ್​ ಸಿಧಿ ಮತ್ತು ಇತರೆ ಆರೋಪಿಗಳು ಉಮಾರಿಯಾದ ನಿವಾಸಿಗಳೆಂದು ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *