Connect with us

  DAKSHINA KANNADA

  ಪುತ್ತೂರಿನ ಮಾಜಿ ಶಾಸಕರು ನೂತನ ಶಾಸಕರ ಬಗ್ಗೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಖಂಡನೀಯ :ಪುತ್ತೂರು ಬ್ಲಾಕ್ ಅಧ್ಯಕ್ಷ ಎಚ್.ಮಹಮ್ಮದಾಲಿ

  ಪುತ್ತೂರು, ಆಗಸ್ಟ್ 30: ನೂತನ ಶಾಸಕರ ಕಚೇರಿಗೆ ಬರೋಬ್ಬರಿ 31 ಲಕ್ಷ ರೂ. ನಗರಸಭೆಯ ತೆರಿಗೆ ಹಣವನ್ನು ಬಳಕೆ ಮಾಡಿರುವ ಕುರಿತು ಶಾಸಕರ ಬಗ್ಗೆ ಆರೋಪ ಹೊರಿಸುತ್ತಿರುವ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಮಾಡಿದ ದುರುಪಯೋಗವನ್ನು ಮೊದಲು ತಿಳಿಯಲಿ. ಅದನ್ನು ಬಿಟ್ಟು ನೂತನ ಶಾಸಕ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ ತಿಳಿಸಿದ್ದಾರೆ.

  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕರಿಗೆ ತನ್ನ ಕಚೇರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕಾಳಜಿಯೂ ಇರಲಿಲ್ಲ. ಹಾಗಾಗಿ ಗೂಡಂಗಡಿ ತರದ ಕಚೇರಿ ಬಳಸುತ್ತಿದ್ದರು ಎಂದು ಲೇವಡಿ ಮಾಡಿದರು.
  ನೂತನ ಶಾಸಕರು 31 ಲಕ್ಷ ತನ್ನ ಕಚೇರಿಗೆ ಖರ್ಚು ಮಾಡಿದ್ದಾರೆ ಎನ್ನುವುದಕ್ಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿರುವ ಅವರು, ಸರಕಾರದ ವಿವಿಧ ಯೋಜನೆಗಳಲ್ಲಿ ಕೋಟ್ಯಾಂತರ ಹಣ ದುರುಪಯೋಗ ಮಾಡಿ ಇದೀಗ ನಮ್ಮ ಶಾಸಕರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

  ಈ ಹಿಂದೆ ಇದೇ ಕಟ್ಟಡ ಹಾಗೂ ಬಳಿ ಇರುವ ಸಮುದಾಯ ಭವನವನ್ನು ಕೆಡವಿ 13 ಕೋಟಿ ರೂ. ವೆಚ್ಚದಲ್ಲಿ ಹೊಸ ನಗರಸಭಾ ಕಚೇರಿ ನಿರ್ಮಿಸಲು ಹೊರಟಿರುವುದು ದುರಪಯೋಗವಲ್ಲವೇ ? ಆಗ ನಗರಸಭೆಗೆ ಇದೇ ಕಟ್ಟಡದಿಂದ ಬರುವ ಆದಾಯಕ್ಕೆ ಕೊರತೆ ಉಂಟಾಗಲಿದೆ ಎಂಬುದು ಆಗ ಅರಿವಿಲ್ಲದಿತ್ತೇ? ಜನರೇ ಇಲ್ಲದ ಗುರುಂಪುನಾರಿನಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ನಿರ್ಮಿಸಿರುವುದು ದುರುಪಯೋಗವಲ್ಲವೇ? ನಗರಸಭೆಯ ಕೆಲವು ಕಡೆ ಇಂಟರ್ ಲಾಕ್ ತೆಗೆದು ಡಾಮರು, ಡಾಮರು ತೆಗೆದು ಇಂಟರ್ ಲಾಕ್ ಅಳವಡಿಸಿರುವುದು ದುಪಯೋಗವಲ್ಲವೇ? ಲಕ್ಷಾಂತರ ರೂ. ಖರ್ಚು ಮಾಡಿ ಸ್ಮಾರ್ಟ್ ಬಸ್ ತಂಗುದಾಣ ನಿರ್ಮಿಸಿರುವುದು ದುರುಪಯೋಗವಲ್ಲವೇ?

  ಮುಕ್ರಂಪಾಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಆಗುವ ಸೇತುವೆಗೆ 1.75 ಕೋಟಿ ಖರ್ಚು ತೋರಿಸಿರುವುದು ದುರಪಯೋಗವಲ್ಲವೇ? ನಗರಸಭೆಯಿಂದ ಚಿಣ್ಣರ ಪಾರ್ಕ್ಗೆ 30 ಲಕ್ಷ ರೂ. ನಗರಸಭೆಯಿಂದ ಬಳಕೆ ಮಾಡಿರುವುದು ದುರುಪಯೋಗವಲ್ಲವೇ ?

  ಇರ್ದೆ ಗ್ರಾಮದ ಕಲ್ಲಾಡಿ ಎಂಬಲ್ಲಿ 500 ಮೀ. ಅಂತರದಲ್ಲಿ ರಸ್ತೆ ಸಂಪರ್ಕ ಇಲ್ಲದ ಗುಡ್ಡೆಗೆ 6.50 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿರುವುದು ದುರುಪಯೋಗವಲ್ಲವೇ ? ನಳಿನ್ ಕುಮಾರ್ ಕಟೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಕ್ಷಾಂತರ ಖರ್ಚು ಮಾಡಿ ಐಷರಾಮಿ ಕಚೇರಿ ಮಾಡಿರುವುದು ದುರುಪಯೋಗವಲ್ಲವೇ ಎಂದು ದುರುಯೋಗದ ಪಟ್ಟಿಯನ್ನೇ ಮುಂದಿಟ್ಟರು.

  ಇದೀಗ ಅಧಿಕಾರ ಕಳೆದುಕೊಂಡ ಮಾಜಿ ಶಾಸಕರು ಪುತ್ತೂರು ಶಾಸಕರು ನಿರ್ಮಿಸಿದ ಕಚೇರಿ ಬಗ್ಗೆ ಹೊಟ್ಟೆಕಿಚ್ಚಿನಿಂದ ಈ ರೀತಿಯ ಹೇಳಿಕೆಗಳನ್ನು ನೀಡುವುದು ಖಂಡನೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರೋಶನ್ ಬನ್ನೂರು, ವಿಕ್ಟರ್ ಪಾಯಸ್, ಮಂಜುನಾಥ ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply