Connect with us

    DAKSHINA KANNADA

    “ಮಂಗಳಾದೇವಿಯಲ್ಲಿ ಮಾತ್ರ ನವರಾತ್ರಿ ಉತ್ಸವ ನಡೆಯುತ್ತಿದ್ದ್ಯಾ? ಕುದ್ರೋಳಿ ದೇವಸ್ಥಾನದಲ್ಲೂ ನಡೆಯುತ್ತಿದೆ ಅಲ್ಲಿ ಯಾಕೆ ಬಾವುಟ ಕಟ್ಟೋದಿಲ್ಲ”.।?

    ಮಂಗಳಾದೇವಿಯಲ್ಲಿ ಮಾತ್ರ ನವರಾತ್ರಿ ಉತ್ಸವ ನಡೆಯುತ್ತಿದ್ದ್ಯಾ..? ಕುದ್ರೋಳಿ ದೇವಸ್ಥಾನದಲ್ಲೂ ನಡೆಯುತ್ತಿದೆ ಅಲ್ಲಿ ಯಾಕೆ ಬಾವುಟ ಕಟ್ಟೋದಿಲ್ಲ,

    ಮಂಗಳೂರು : ಮಂಗಳಾ ದೇವಿ ದೇವಸ್ಥಾನದಲ್ಲಿ ಧರ್ಮ ದಂಗಲ್ ವಿಚಾರವಾಗಿ ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಪ್ರತಿಕ್ರೀಯಿಸಿದ್ದಾರೆ.

    ಹಿಂದೂ ವ್ಯಾಪಾರಸ್ಥರ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮೇಲೇ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ದ. ಕ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯಿಂದ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಮುನೀರ್ ಶರಣ್ ಪಂಪ್ ವೆಲ್ ಹಾಗೂ ಅವರ ತಂಡ ದೇವಸ್ಥಾನದ ಜಾತ್ರಾ ಬೀದಿಗೆ ಬಂದು ಹಿಂದೂ ಅಂಗಡಿಗಳಿಗೆ ಬಜರಂಗದಳದ ಧ್ವಜ ಕಟ್ಟಿದ್ದಾರೆ. ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟುವ ಮೂಲಕ ಬಹಿಷ್ಕಾರದ ಕ್ರಮಕ್ಕೆ ಮುಂದಾಗಿದ್ದಾರೆ. ಮುಸ್ಲಿಂರ ಅಂಗಡಿಗಳಿಗೆ ಬಾವುಟ ಇಲ್ಲ ಅಲ್ಲಿ ವ್ಯಾಪಾರ ಮಾಡಬಾರದು ಎಂಬ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇದು ಈ ನೆಲದ ಕಾನೂನಿನ ಉಲ್ಲಂಘನೆಯಾಗಿದೆ ಎಂದ ಅವರು ಪೊಲೀಸ್ ಇಲಾಖೆ ಈ ಕೂಡಲೇ ಶರಣ್ ಪಂಪ್ ವೆಲ್ ಹಾಗೂ ಗ್ಯಾಂಗ್ ನ್ನ ಬಂಧಿಸಬೇಕು. ಪೊಲೀಸ್ ಇಲಾಖೆ ಶರಣ್ ಪಂಪ್ ವೆಲ್ ಮುಂಭಾಗ ಮಂಡಿಯೂರಿದ ರೀತಿಯಲ್ಲಿ ಇದೆ. ಬಿಜೆಪಿ ಸಂಸದ ಹಾಗೂ ನಳಿನ್ ಕುಮಾರ್ ಕಟೀಲ್ ಶರಣ್ ಮತ್ತು ಗ್ಯಾಂಗ್ ನ್ನ ಚೂ ಬಿಟ್ಟಿದ್ದಾರೆ. ಲೋಕ ಸಭಾ ಚುನಾವಣೆ ಹಿನ್ನಲೆ ಅಭಿವೃದ್ಧಿಯಂತಹ ಯಾವುದೇ ಸಾಧನೆಗಳು ಇಲ್ಲ. ಸ್ಥಳೀಯರಿಗೆ ಉದ್ಯೋಗ ಸಹಿತ ಯಾವುದೇ ಸಾಧನೆಗಳು ಇಲ್ಲದ ಕಾರಣ ಈ ರೀತಿ ಪ್ರಯತ್ನಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮುಂದಾಗಿದ್ದಾರೆ. ಕೋಮು ಶಕ್ತಿಗಳ ಮುಂದೆ ಪೊಲೀಸ್ ಇಲಾಖೆ ಮಂಡಿಯೂರಿರೋದನ್ನ ಒಪ್ಪಲು ಸಾಧ್ಯವಿಲ್ಲ. ಇದೆ ಶರಣ್ ಪಂಪ್ ವೆಲ್ ರನ್ನ ಉಡುಪಿಗೆ ಬರದಂತೆ ಅಲ್ಲಿನ ಎಸ್ಪಿ ತಡೆಯುತ್ತಾರೆ ಆದ್ರೆ ಮಂಗಳೂರಿನಲ್ಲಿ ಹೇಗೆ ಈ ರೀತಿ ಪುಂಡಾಟ ಮೆರೆಯಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದ ಮುನೀರ್ ಮಂಗಳಾದೇವಿಯಲ್ಲಿ ಮಾತ್ರ ನವರಾತ್ರಿ ಉತ್ಸವ ನಡೆಯುತ್ತಿದ್ದ್ಯಾ..? ಕುದ್ರೋಳಿ ದೇವಸ್ಥಾನದಲ್ಲೂ ನಡೆಯುತ್ತಿದೆ ಅಲ್ಲಿ ಯಾಕೆ ಬಾವುಟ ಕಟ್ಟೋದಿಲ್ಲ, ಕುದ್ರೋಳಿ ದೇವಸಸ್ಥಾನದಲ್ಲಿ ಬಾವುಟ ಕಟ್ಟಿದ್ರೆ ಅಲ್ಲಿನ ಕೋಟಿ ಚೆನ್ನಯ ಹಾಗೂ ನಾರಾಯಣ ಗುರುಗಳ ಅನುಯಾಯಿಗಳು ಈ ಗ್ಯಾಂಗ್ ಅನ್ನ ಬಸ್ಕಿ ಹೊಡೆಸ್ತಾರೆ. ಬಡಪಾಯಿ ಯುವಕರ ರಕ್ತ ಹಾರಿಸಿ ಜೈಲಿಗೆ ಕಳಿಸಿ 4 ನೇ ಬಾರಿಗೆ ನಳಿನ್ ಕುಮಾರ್ ಕಟೀಲ್ ರನ್ನ ಗೆಲ್ಲಿಸುವ ಹುನ್ನಾರ ಇದಾಗಿದ್ದು ಉಸ್ತುವಾರಿ ಸಚಿವರು ಇದರ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲವಾದ್ರೆ ಇದನ್ನ ಸವಾಲಾಗಿ ಸ್ವೀಕರಿಸಿ ಇದರ ವಿರುದ್ಧ ಹೋರಾಡುತ್ತೇವೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply