LATEST NEWS
ಇಂದು ಕೇರಳದಲ್ಲಿ ಲೋಕಾರ್ಪಣೆಗೊಳ್ಳಿದೆ ದೇಶದ ಮೊತ್ತ ಮೊದಲ 24/7 ಆನ್‌ಲೈನ್ ಕೋರ್ಟ್..!
ವಾರದ ಏಳೂ ದಿನ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ದೇಶದ ಮೊದಲ ಆನ್‌ಲೈನ್ ನ್ಯಾಯಾಲಯ (on line court) ಕೇರಳದ ಕೊಲ್ಲಂನಲ್ಲಿ ಇಂದು ಬುಧವಾರ ಉದ್ಘಾಟನೆಗೊಳ್ಳಲಿದೆ.
ತಿರುವನಂತಪುರಂ: ವಾರದ ಏಳೂ ದಿನ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ದೇಶದ ಮೊದಲ ಆನ್‌ಲೈನ್ ನ್ಯಾಯಾಲಯ (on line court) ಕೇರಳದ ಕೊಲ್ಲಂನಲ್ಲಿ ಇಂದು ಬುಧವಾರ ಉದ್ಘಾಟನೆಗೊಳ್ಳಲಿದೆ.
ಕೇರಳದ ಕೊಲ್ಲಂನಲ್ಲಿ ಇಂದು ಉದ್ಘಾಟನೆ ದೂರು ಸಲ್ಲಿಕೆಯಿಂದ ಹಿಡಿದು, ವಿಚಾರಣೆವರೆಗೆ ಎಲ್ಲವೂ ಡಿಜಿಟಲ್ ಕೋರ್ಟ್‌ರೂಮ್‌ನಲ್ಲೇ ನಡೆಯಲಿರುವ ಹೈಟೆಕ್ ನ್ಯಾಯದಾನ ವ್ಯವಸ್ಥೆ ಇದಾಗಿರಲಿದೆ. ದೂರುದಾರರು ಕೋರ್ಟ್ ಮೆಟ್ಟಿಲು ಹತ್ತದೆಯೇ, ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬಹುದು, ಆನ್ ಲೈನ್ ಮೂಲಕವೇ ಅಗತ್ಯ ಶುಲ್ಕಗಳನ್ನು ಪಾವತಿಸಬಹುದು. ಅಲ್ಲದೆ, ಆನ್ ಲೈನ್ ಮೂಲಕವೇ ವಿಚಾರಣೆಗೂ ಹಾಜರಾಗಬಹುದು. ಆರಂಭಿಕವಾಗಿ ಚೆಕ್‌ಬೌನ್ಸ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಇಲ್ಲಿ ಇತ್ಯರ್ಥಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಇತರೆ ಪ್ರಕರಣಗಳ ವಿಚಾರಣೆಯೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಕೀಲರು ಸಾಕ್ಷ್ಯಗಳು, ಸಾಕ್ಷಿಗಳನ್ನು ಆನ್ ಲೈನ್ ಮೂಲಕವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಬಹುದಾಗಿದೆ. ಆರೋಪಿಗಳಿಗೆ ಸಮನ್ಸ್‌ಗಳನ್ನೂ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವಿದ್ಯುನ್ಮಾನವಾಗಿಯೇ ತಲುಪಿಸಲಾಗುವುದು. ಜಾಮೀನು ಅರ್ಜಿಗಳನ್ನೂ ಆನ್ ಲೈನ್ ಮೂಲಕವೇ ಸಲ್ಲಿಸಲು ಅವಕಾಶವಿದೆ.