Connect with us

    LATEST NEWS

    ಭಾರತೀಯ ವಾಯುಸೇನೆಯಿಂದ ಏರ್ ಸರ್ಜಿಕಲ್ ಸ್ಟ್ರೈಕ್ – 1000 ಕೆಜಿ ಬಾಂಬ್ ಗೆ ನಾಶವಾದ ಉಗ್ರರು

    ಭಾರತೀಯ ವಾಯುಸೇನೆಯಿಂದ ಏರ್ ಸರ್ಜಿಕಲ್ ಸ್ಟ್ರೈಕ್ – 1000 ಕೆಜಿ ಬಾಂಬ್ ಗೆ ನಾಶವಾದ ಉಗ್ರರು

    ನವದೆಹಲಿ ಫೆಬ್ರವರಿ 26: ಇತ್ತೀಚೆಗೆ ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಗೆ ಭಾರತೀಯ ವಾಯು ಸೇನೆ ಪ್ರತೀಕಾರ ತೀರಿಸಿದೆ. ಇಂದು ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

    ಮಂಗಳವಾರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಈ ದಾಳಿ ನಡೆಸಿದ್ದು ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

    ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದೆ.

    ಭಾರತೀಯ ವಾಯುಸೇನೆಯ ಮಿರಾಜ್ ವಿಮಾನಗಳು ಈ ವೈಮಾನಿಕ ದಾಳಿ ನಡೆಸಿದ್ದು, 12 ಮಿರಾಜ್ 2000 ಜೆಟ್ ವಿಮಾನಗಳು 1000 ಪೌಂಡ್ ಬಾಂಬ್‍ನಿಂದ ಗಡಿ ನಿಯಂತ್ರಣ ರೇಖೆಯಿಂದಾಚೆಯಿರುವ ಉಗ್ರರ ಶಿಬಿರಗಳನ್ನು ನಿರ್ನಾಮ ಮಾಡಿವೆ
    ಇದಕ್ಕೂ ಮೊದಲು ಭಾರತೀಯ ಸೇನೆಯ ಯುದ್ಧ ವಿಮಾನಗಳು ಎಲ್‍ಓಸಿ ಗಡಿಯನ್ನು ದಾಟಿ ಪಾಕಿಸ್ತಾನದತ್ತ ಬರುತ್ತಿವೆ ಎಂದು ಪಾಕ್ ಹೇಳಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply