Connect with us

KARNATAKA

ನಮ್ಮಲ್ಲಿ ಹೊಗೆ ಮಾತ್ರ ಶುರುವಾಗಿದೆ.. ಆದರೆ ಕಾಂಗ್ರೆಸ್‌ನಲ್ಲಿ ಬೆಂಕಿಯೇ ಬಿದ್ದಿದೆ – ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕಟೀಲ್..!

ಕಲಬುರಗಿ: ನಮ್ಮಲ್ಲಿ ಹೊಗೆ ಮಾತ್ರ ಶುರುವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಬೆಂಕಿಯೇ ಬಿದ್ದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ದೊಡ್ಡ ಪಕ್ಷ  ಕೆಲ ವ್ಯತ್ಯಾಸಗಳು ಇಲ್ಲಿ ಸಹಜ., ಅವನ್ನ ಸರಿಪಡಿಸುತ್ತೇವೆ, ಪಕ್ಷದಲ್ಲಿ ಸರಿಪಡಿಸುವ ವ್ಯವಸ್ಥೆ ಇದೆ ಎಂದಿದ್ದಾರೆ.

 ಸಿದ್ದರಾಮಯ್ಯ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾ ತಿರುಗುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಮುಂದಿನ ಸಿಎಂ ಅಲ್ಲ, ತಾನು ಮುಂದಿನ ಸಿಎಂ ಅಂತ ಡಿ ಕೆ ಶಿವಕುಮಾರ್​ ಟ್ವಿಟ್ ಮಾಡಿದ್ದಾರೆ ಎಂದು ಡಿಕೆಶಿಗೆ ಕಟೀಲ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು‌.

ಬಿಜೆಪಿ ದುಡ್ಡಿನ ಮೇಲೆ ಎಲೆಕ್ಷನ್ ಮಾಡ್ತಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರಕ್ರಿಯಿಸಿದ ಅವರು 73 ವರ್ಷದಲ್ಲಿ ಕಾಂಗ್ರೆಸ್​ನವರು ಯಾವ ರೀತಿ ಎಲೆಕ್ಷನ್ ಮಾಡಿದ್ದಾರೆ ಕೇಳಿ ನೋಡಿ ಎಂದು ಹರಿಹಾಯ್ದರು.

ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಸರ್ಕಾರ ರಕ್ಷಣೆ ಮಾಡ್ತಿದೆ ಅನ್ನೋ ವಕೀಲ ಜಗದೀಶ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಕಟೀಲ್​, ಪ್ರಕರಣ ಎಸ್‌ಐಟಿ ತನಿಖೆ ಹಂತದಲ್ಲಿರುವುದರಿಂದ,ನಾನು ಏನು ಮಾತಾಡೋದಿಲ್ಲ. ಎಸ್​ಐಟಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿದ್ದಾರೆ ಎಂದಷ್ಟೇ ಹೇಳಿದರು.