DAKSHINA KANNADA
ಲಾರಿ ಮತ್ತು ಕಾರು ನಡುವೆ ಭೀಕರ ರಸ್ತೆ ಅಪಘಾತ – ಪುತ್ತೂರಿನ ನವವಿವಾಹಿತೆ ಸಾವು
ಬೆಂಗಳೂರು ಎಪ್ರಿಲ್ 3: ಕೋಳಿ ಸಾಗಾಟದ ಲಾರಿ ಮತ್ತು ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪುತ್ತೂರಿನು ನವ ವಿವಾಹಿತೆಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ ಎಂದು ಗುರುತಿಸಲಾಗಿದೆ.
ಗೊಪೀಕ್ ಹಾಗೂ ಧನುಷ್ ರವರ ವಿವಾಹ ಕೇವಲ 40 ದಿನಗಳ ಹಿಂದೆಯಷ್ಟೇ ನಡೆದಿದ್ದು, ನವ ದಂಪತಿಗಳು ತಮ್ಮ ಸಂಬಂಧಿಕರಾದ ಶುಭಲಕ್ಷ್ಮೀ ಮತ್ತು ರೂಪಾ ವೇಣುಗೋಪಾಲ್ ಎಂಬವರ ಜತೆ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ತೆರಳಿದ್ದರು.
ಕಾರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಸಮೀಪಿಸುತ್ತಿದ್ದಂತೆ ಕೋಳಿ ಸಾಗಾಟದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಗೋಪಿಕ್ ಅವರ ಪತ್ನಿ ಧನುಷಾ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಧನುಷಾ ಪತಿ ಗೊಪೀಕ್ , ರೂಪ ವೇಣುಗೋಪಾಲ್ ಹಾಗೂ ಶುಭ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದು ಅವರನ್ಬು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೊಪೀಕ್ ದಾರಂದಕುಕ್ಕು ನಿವಾಸಿ ಸವಿತಾ ಉದಯ ಕುಮಾರ್ ನಾಯ್ಕ್ ಅವರ ಪುತ್ರ . ಮೃತ ಧನುಷಾ ಬೆಳ್ತಂಗಡಿ ಗೇರುಕಟ್ಟೆ ಕುಂಟಿನಿ ನಿವಾಸಿ ರೂಪಾ ಮತ್ತು ಪದ್ಮನಾಭ ಶೆಟ್ಟಿಯವರ ಪುತ್ರಿ.
You must be logged in to post a comment Login