LATEST NEWS
ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ

ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ
ಉಡುಪಿ ಡಿಸೆಂಬರ್ 8: ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಪ್ರಕರಣವನ್ನು ಹೆಬ್ರಿ ಪೊಲೀಸರು ಪತ್ತೆ ಹಚ್ಚಿ ಸುಮಾರು 15 ಕೆಜಿ ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಮತ್ತು ಮಂಗಳೂರು ನಡುವೆ ಸಂಚರಿಸುವ ಎಸ್ ವಿ ಆರ್ ಎಂ ಬಸ್ ನಲ್ಲಿ ಪ್ರತಿನಿತ್ಯ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡಲಾಗುತ್ತಿದ್ದು ಎಂದು ಹೆಬ್ರಿ ಪೊಲೀಸರಿಗೆ ದೂರು ಬಂದಿತ್ತು.

ಈ ಹಿನ್ನಲೆಯಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿದ ಹೆಬ್ರಿ ಪೊಲೀಸರು ಹೆಬ್ರಿ ನಗರ ಸಮೀಪ ಬಸ್ ಸೀಜ್ ಮಾಡಿ, ಸುಮಾರು 15 ಕೆ.ಜಿ ಯಷ್ಟು ಅಕ್ರಮ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಮಾಂಸವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಪ್ರಕರಣದ ಕುರಿತಂತೆ ತನಿಖೆ ನಡೆಸಲಾಗುತ್ತಿದೆ.