ಜಾಲತಾಣದಲ್ಲಿ ಉಭಯ ಮತೀಯರ ಜಾತಿ ನಿಂದನೆ ಮತ್ತು ಬೆದರಿಕೆ : ದ.ಕ.ಮುಸ್ಲೀಂ ಒಕ್ಕೂಟದಿಂದ ದೂರು

ಮಂಗಳೂರು, ಡಿಸೆಂಬರ್ 07 : ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕುರಿತು ನೀಡಿದ ಭಾವನಾತ್ಮಕ ಹೇಳಿಕೆಗಳು.

ಆ ಹೇಳಿಕೆಗಳಿಂದ ಉದ್ಭವವಾಗಿರುವ ಗೊಂದಲದಿಂದಾಗಿ ಸಾಮಾಜಿಕ ಜಾಲಾ ತಾಣಗಳಲ್ಲಿ ನಡೆಯುತ್ತಿರುವ ಪರ ವಿರೊಧ ಸಂದೇಶ, ಧ್ವನಿ ಸುರುಳಿಗಳಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲೀಂ ಒಕ್ಕೂಟದ ನಿಯೋಗ ಮಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿತು. ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಕೆ.ಅಶ್ರಫ್ ಅವರ ನೇತೃತ್ವದಲ್ಲಿ ನಿಯೋಗ ಪೊಲೀಸ್ ಉಪ ಆಯುಕ್ತರಾದ ಹನುಮಂತ ರಾಯರನ್ನು ಭೇಟಿ ನೀಡಿ ದೂರು ಸಲ್ಲಿಸಿದೆ. ಒಂದು ನಿರ್ಧಿಷ್ಟ ಸಮುದಾಯದ ಕಾಂಗ್ರೇಸ್ ಕಾರ್ಯಕರ್ತರೇನ್ನಲಾದ ವ್ಯಕ್ತಿಯೋರ್ವರು ಕನ್ನಡ ಭಾಷೇಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ತೀವ್ರವಾಗಿ ಬೆದರಿಸಿ ಎನ್ ಕೌoಟರ್ ಮಾಡಬೇಕೆಂದು, ನಿಂದನಾತ್ಮಕವಾಗಿ ಸಾಮಾಜಿಕ ಜಾಲ ತಾಣದಲ್ಲಿ ದ್ವನಿ ಸಂದೇಶವು ಹರಿದಾಡುತ್ತಿದೆ. ಮತ್ತೊಂದೆಡೆ, ಇನ್ನೋರ್ವ ವ್ಯಕ್ತಿಯು ತಾನು ಓರ್ವ ಕಾಂಗ್ರೇಸ್ಸ್ ಕಾರ್ಯಕರ್ತನೇಂದು ಹೇಳಿಕೊಂಡು ತುಳು ಭಾಷೇಯಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ ರವರನ್ನೂ ಬೆದರಿಸಿ, ಗುಂಡಿಕ್ಕಬೇಕೇಂಬ ಅತೀ ನಿಂದನಾತ್ಮಕವಾಗಿ ಬೈದ 1 ನಿಮಿಷ 29 ಸೇಕೆಂಡುಗಳ ದ್ವನಿ ಸಂದೇಶದ ಸುರುಳಿಯು ಹರಿದಾಡುತ್ತಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾರಸ್ಯ ಕದಡುವ ಸಾಧ್ಯತೆಗಳಿದ್ದು, ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಮನವಿ ಮಾಡಿದರು.

ವಿಡಿಯೋಗಾಗಿ…

Facebook Comments

comments