ಶಾಸಕ ಹರೀಶ್ ಪೂಂಜಾ ದೇವಲೋಕದಿಂದ ಇಳಿದು ಬಂದವರಾ ? – ಮಾಜಿ ಶಾಸಕ ವಸಂತ ಬಂಗೇರಾ

ಬೆಳ್ತಂಗಡಿ ಡಿಸೆಂಬರ್ 8: ಜಿಲ್ಲೆಯಲ್ಲಿ 8 ಶಾಸಕರಿದ್ದು ಹರೀಶ್ ಪೂಂಜರಿಗೆ ಮಾತ್ರ ರೂ 102 ಕೋಟಿ ಅಭಿವೃದ್ಧಿ ಅನುದಾನ ಮಂಜುರಾಗಿದ್ದು ಅವರೇನು ದೇವಲೊಕದಿಂದ ಇಳಿದು ಬಂದವರಾ ? ಎಂದು ಮಾಜಿ ಶಾಸಕ ವಸಂತ ಬಂಗೇರ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಹರೀಶ್ ಪೂಂಜಾ ಶಾಸಕರಾದ ನಂತರ ಬೆಳ್ತಂಗಡಿ ತಾಲೂಕಿಗೆ 102 ಕೋಟಿ ರೂಪಾಯಿ ಅಭಿವೃದ್ಧಿ ಅನುದಾನ ಮಂಜುರಾತಿ ಮಾಡಿದ್ದಾರೆ ಎಂದು ಪತ್ರಿಕಾ ಜಾಹಿರಾತನ್ನು ನೀಡಿದ್ದರು.

ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಮಾಜಿ ಶಾಸಕ ವಸಂತ ಬಂಗೇರ ಮಂಜೂರಾದ ಎಲ್ಲಾ ಅಭಿವೃದ್ಧಿ ಅನುದಾನ ಮೊತ್ತವು ತಾನು ಶಾಸಕನಾಗಿದ್ದಾಗ ಟೆಂಡರ್ ಆಗಿದ್ದು, ಆ ಸಮಯದಲ್ಲಿ ಅದನ್ನು ಒಪನ್ ಮಾಡದಂತೆ ಚುನಾವಣೆ ಇದ್ದ ಕಾರಣ ಚುನಾವಣಾ ಕಮೀಶನರ್ ತಡೆ ಹಿಡಿದದ್ದು ಚುನಾವಣಾ ನಂತರ ಟೆಂಡರ್ ಒಪನ್ ಆಗಿ ಕಾಮಗಾರಿ ಗಳಿಗೆ ಚಾಲನೆ ಸಿಕ್ಕಿದೆ ಎಂದು ಹೇಳಿದರು.

ಇವರದೇ ಪಕ್ಷದ ಸುಳ್ಯದ ಶಾಸಕ ಅಂಗಾರ ರವರು 6 ಬಾರಿ ಶಾಸಕರಗಿದ್ದು ಅವರಿಗೆ ಸಹ ಈ ವರಗೆ ಅನುದಾನ ಮಂಜೂರಗಿಲ್ಲ.ಹೊಗಲಿ ಬಿಡಿ, U T ಖಾದರ್ ರವರು ಉಸ್ತುವಾರಿ ಸಚವರಿಗೂ ಅನುದಾನ ದೊರೆತಿಲ್ಲ! ಆದರೆ ಹರೀಶ್ ಪೂಂಜರವರಿಗೆ 102 ಕೊಟಿ ಮಂಜುರಾಗಿದ್ದು ಇವರೇನು ಇಂದ್ರಲೋಕ ಇಳಿದು ಬಂದವರೇ ಎಂದು ಪತ್ರಕರ್ತ ರಲ್ಲಿ ಪ್ರಶ್ನೆ ಮಾಡಿದರು.

ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ 4 ಲೇನ್ ರಸ್ತೆ ಹಾಗು ಅಲ್ಲಿಯ ಕೆಲವು ಅಭಿವೃದ್ಧಿ ಕಾಮಗಾರಿ ಮಂಜುರಾತಿ ಆಗಿದ್ದು ದ.ಕ ಜಿಲ್ಲಾ ಉಸ್ತುವಾರಿ ಮಂತ್ರಿ U.T ಖಾದರ್ ಪ್ರಸ್ತಾವನೆಯಂತೆ ಹೊರತು ಹರೀಶ್ ಪೂಂಜರ ಸ್ಪೀಡ್ ನಿಂದ ಅಲ್ಲ ಮತ್ತು ಅದನ್ನು ಸಹ ತನ್ನ ಜಾಹಿರಾತು ನಲ್ಲಿ ಹಾಕಿದ್ದು ಹಾಸ್ಯಸ್ಪದ ಎಂದು ಹೇಳಿದರು.

3 Shares

Facebook Comments

comments