Connect with us

    KARNATAKA

    ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಡ್ರೆಸ್ ಚೇಂಜ್ ಮಾಡುವುದನ್ನು ರೆಕಾರ್ಡ್ ಮಾಡುತ್ತಿದ್ದ ಲ್ಯಾಬ್ ಟೆಕ್ನಿಷಿಯನ್

    ಬೆಂಗಳೂರು , ಫೆಬ್ರವರಿ 23: ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಡ್ರೆಸ್ ಚೇಂಜ್ ಮಾಡುವುದನ್ನು ಮೊಬೈಲ್​​ನಲ್ಲಿ ರೆಕಾರ್ಡ್ ಮಾಡಿ, ನಂತರ ಮನೆಯಲ್ಲಿ ನೋಡಿ ಎಂಜಾಯ್​ ಮಾಡ್ತಿದ್ದ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿರುವ 29 ವರ್ಷದ ಮಾಲತೇಶ್ ಎಂಬುವನೇ ಆ ದುಷ್ಕರ್ಮಿ. ಆಸ್ಪತ್ರೆಯ ಆಪರೇಷನ್ ರೂಂನಲ್ಲಿ ಹೆಚ್ಚಾಗಿ ಇರುತ್ತಿದ್ದ ಎನ್ನಲಾದ ಮಾಲತೇಶ್, ಆಪರೇಷನ್ ವೇಳೆಗೆ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವ ಸಮಯಕ್ಕೆ ಕಾಯುತ್ತಿದ್ದ.

    ಆ ವೇಳೆಗೆ ಮೊಬೈಲ್​ನಲ್ಲಿ ಕ್ಯಾಮೆರಾ ಆನ್ ಮಾಡಿ, ಚಾರ್ಜ್​ಗೆ ಹಾಕುವ ನೆಪದಲ್ಲಿ ಚೇಂಜಿಂಗ್ ರೂಂನಲ್ಲಿ ತನ್ನ ಮೊಬೈಲ್​ಅನ್ನು ಇಡುತ್ತಿದ್ದ. ಅದರಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡುತ್ತಿದ್ದ. ನಂತರ ಆ ರೆಕಾರ್ಡಿಂಗ್​ಅನ್ನು ಮನೆಯಲ್ಲಿ ಒಬ್ಬನೇ ಇದ್ದಾಗ ನೋಡಿ ಎಂಜಾಯ್ ಮಾಡುತ್ತಿದ್ದ ಎನ್ನಲಾಗಿದೆ.

    ಹೀಗೆ ಒಂದು ದಿನ ಚಾರ್ಜ್​ಗೆ ಹಾಕಿದ್ದ ಆತನ ಮೊಬೈಲ್‌ಅನ್ನು ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಕ್ಯಾಮೆರಾ ಆನ್ ಆಗಿದ್ದು, ರೆಕಾರ್ಡ್​ ಮಾಡುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಮೊಬೈಲ್ ಪರಿಶೀಲಿಸಿದಾಗ ಅವನ ಅಸಲಿಯತ್ತು ಬೆಳಕಿಗೆ ಬಂದಿದೆ. ಕೂಡಲೇ ಮಹಿಳಾ ಸಿಬ್ಬಂದಿ ಸಂಜಯ್ ಗಾಂಧಿ ಆಸ್ಪತ್ರೆಯ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಜಯ್ ಗಾಂಧಿ ಆಸ್ಪತ್ರೆಯ ಆಡಳಿತ ಮಂಡಳಿಯವರು ಮಾಲತೇಶ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತಿಲಕ ನಗರ ಪೊಲೀಸರು ವಿಕೃತ ಮನಸ್ಕ ಮಾಲತೇಶ್​ನನ್ನು ಬಂಧಿಸಿದ್ದಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *