LATEST NEWS
ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಪಲ್ಟಿಯಾದ ಮರಳು ಸಾಗಿಸುತ್ತಿದ್ದ ಟಿಪ್ಪರ್
ಉಳ್ಳಾಲ ಫೆಬ್ರವರಿ 23: ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. ಈ ಘಟನೆ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.
ತಲಪಾಡಿಯ ವಿಜಯಾ ಬ್ಯಾಂಕ್ ಬಳಿಯ ನದಿಯಿಂದ ದಿನ ನಿತ್ಯವೂ ಅಕ್ರಮವಾಗಿ ಮರಳನ್ನು ಎತ್ತಿ ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಿಂದ ಕೇರಳಕ್ಕೆ ಮರಳನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದೆ ಕೈಕಟ್ಟಿ ಕೂತಿದ್ದಾರೆ.
ನಿನ್ನೆ ಮಧ್ಯಾಹ್ನ ಮುಖ್ಯ ರಸ್ತೆ ತಪ್ಪಿಸಿ ತಲಪಾಡಿಯ ಒಳ ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ನಿಯಂತ್ರಣ ತಪ್ಪಿ ಖಾಸಗಿ ಜಾಗದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಆಗಿ ಬಿದ್ದಿದೆ. ಟಿಪ್ಪರ್ ಪಲ್ಟಿ ಆದ ವಿಷಯ ತಿಳಿದ ಕೂಡಲೇ ಉಳ್ಳಾಲ ಇನ್ಸ್ ಪೆಕ್ಟರ್ ಸಮೇತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.