LATEST NEWS
ಟೈಂ ಕೀಪಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ಹೊಡೆದಾಟ – ಬಸ್ ವಶಕ್ಕೆ
ಉಡುಪಿ ಫೆಬ್ರವರಿ 23: ಎರಡು ಖಾಸಗಿ ಬಸ್ ಗಳ ಚಾಲಕರು ಟೈಂ ಕೀಪಿಂಗ್ ಬಗ್ಗೆ ಉಚ್ಚಿಲ ಪೇಟೆಯಲ್ಲಿ ಹೊಡೆದಾಡಿಕೊಂಡ ಘಟನೆ ಸೋಮವಾರ ಸಂಭವಿಸಿದೆ. ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ವಿಶಾಲ್ ಎಂಬ ಹೆಸರಿನ ಖಾಸಗಿ ಬಸ್ಸು, ನವದುರ್ಗಾ ಬಸ್ಸಿನ ಚಾಲಕರು ಹೊಡೆದಾಡಿಕೊಂಡವರು.
ಪಡುಬಿದ್ರಿಯಿಂದ ಬರುವಾಗ ಸಮಯದಲ್ಲಿ ಏರುಪೇರಾಗಿ ನವದುರ್ಗಾ ಬಸ್ಸು ಮುಂದೆ ಬಂದಿತ್ತು. ಹಿಂದಿನಿAದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ದಿಕ್ ಎಂಬಾತ ಕೆಳಗಿಳಿದು ನವದುರ್ಗಾ ಬಸ್ಸಿನ ಚಾಲಕ ಇಕ್ಬಾಲ್ ಎಂಬವರಿಗೆ ಥಳಿಸಿದ್ದಾನೆ.
ಇದೇ ಬಸ್ ಗಳ ಹಿಂದೆ ಕಾಪು ಠಾಣಾಧಿಕಾರಿ ರಾಘವೇಂದ್ರ ತಮ್ಮ ಜೀಪಿನಲ್ಲಿ ಬರುತ್ತಿದ್ದರು. ಇಬ್ಬರ ಗಲಾಟೆ ಕುರಿತು ಪಡುಬಿದ್ರಿ ಠಾಣಾಧಿಕಾರಿ ದಿಲೀಪ್‌ರವರಿಗೆ ಮಾಹಿತಿ ನೀಡಿದ್ದಾರೆ. ಪಡುಬಿದ್ರಿ ಠಾಣಾಧಿಕಾರಿ ದೀಲಿಪ್‌ರವರು ಸ್ಥಳಕ್ಕೆ ಆಗಮಿಸಿ ಎರಡೂ ಬಸ್ಸನ್ನು ಸೀಜ್ ಮಾಡಿ ಇಬ್ಬರು ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಕೆಲದಿನಗಳ ಹಿಂದೆ ಎರಡು ಬಸ್ಸಿನ ಚಾಲಕರು ಕಾಪು ಮಾರಿಗುಡಿಯ ಹತ್ತಿರ ಕಬ್ಬಿಣದ ರಾಡು ಹಿಡಿದು ಹೊಡೆದಾಡುವ ಮಟ್ಟಕ್ಕೆ ಇಳಿದಿದ್ದು, ಜಿಲ್ಲೆಯಲ್ಲಿ ಮತ್ತೆ ಇಂತಹ ಪ್ರಕರಣ ಮರುಕಳಿಸಬಾರದೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.