DAKSHINA KANNADA
ಕಡಬ ಕೋಟೆಸಾರು ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
ಕಡಬ ಫೆಬ್ರವರಿ 23: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ಕೋಟೆ ಸಾರು ನದಿಯಲ್ಲಿ ಸುಮಾರು 65 ರಿಂದ 70 ವಯಸ್ಸಿನ ಹೆಂಗಸಿನ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಸಮೀಪ ಮೃತರು ಧರಿಸಿದ ಚಪ್ಪಲಿ ಹಾಗೂ ಮೃತದೇಹದ ಕೈಯಲ್ಲಿ ಕನ್ನಡಕ ಇರುವುದು ಕಂಡುಬಂದಿದೆ. ಮೃತರ ಗುರುತು ಪತ್ತೆಯಾಗದ ಹಿನ್ನಲೆ ಮೃತದೇಹವನ್ನು ಮಂಗಳೂರಿನ ದೇರಳಕಟ್ಟೆಯ ಮೆಡಿಕಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು,ಈ ಬಗ್ಗೆ ಕಡಬ ಪೋಲೀಸರು ಮಾಹಿತಿ ಪಡೆಯುತ್ತಿದ್ದಾರೆ.