LATEST NEWS
ಭಾರಿ ಮಳೆ ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಭಾರಿ ಮಳೆ ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಮಂಗಳೂರು ಮೇ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆ ಸಂಪೂರ್ಣ ಜಲಾವೃತವಾಗಿದೆ. ಭಾರಿ ಮಳೆ ಹಿನ್ನಲೆ ಇಂದು ಮತ್ತು ನಾಳೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಿ ದಕ್ಷಿಣ ಕ್ನನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಮಂಗಳೂರಿನ ಪರಿಸ್ಥಿತಿ ನಿಗಾ ವಹಿಸಲು ಜಿಲ್ಲಾಡಳಿತದ ವತಿಯಿಂದ 10 ತಂಡಗಳ ರಚಿಸಲಾಗಿದೆ.
ಮಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದಾದ ಪರಿಸ್ಥಿತಿ ಅವಲೋಕನಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ತಾಲೂಕು ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಈ ನಡುವೆ ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಮಾನ ರೈಲು ಸಂಚಾರ ದಲ್ಲಿ ಯೂ ಭಾರಿ ವ್ಯತ್ಯಯ ಉಂಟಾಗಿದೆ. ಮಂಗಳೂರಿನಿಂದ ಹೊರಡುವ ರೈಲುಗಳ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು ಮಂಗಳೂರಿಗೆ ಬರುವ ರೈಲುಗಳು ವಿಳಂಬವಾಗಲಿದೆ. ಕೆಲ ವಿಮಾನಗಳ ಹಾರಟ ರದ್ದುಗೊಳಿಸಲಾಗಿದೆ.
ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಡಬೇಕಾಗಿದ್ದ ಮೂರು ರೈಲುಗಳ ವೇಳಾಪಟ್ಟಿ ಬದಲಾಗಿದ್ದು, ಮಂಗಳೂರಿನಿಂದ ಮುಂಬಯಿಗೆ ಮಧ್ಯಾಹ್ನ 2.35 ಕ್ಕೆ ತೆರಳುವ ಮತ್ಸ್ಯಗಂಧ ಎಕ್ಸಪ್ರೆಸ್ ಸಂಜೆ 7 ಗಂಟೆಗೆ ತೆರಳಲಿದೆ.
ಮಂಗಳೂರಿನಿಂದ 1.25ಕ್ಕೆ ಚೆನೈಗೆ ತೆರಳಬೇಕಾಗಿದ್ದ ಚೆನೈ ಸೆಂಟ್ರಲ್ ಎಕ್ಸಪ್ರೆಸ್ ಇಂದು ಸಂಜೆ 5 ಕ್ಕೆ ಮಂಗಳೂರಿನಿಂದ ಹೊರಡಲಿದೆ.
ಇಂದು ರಾತ್ರಿ ಚೆನೈಗೆ ಹೊರಡಲಿರುವ ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್ ಸುಮಾರ 1 ಗಂಟೆ 40 ನಿಮಿಷ ತಡವಾಗಿ ಹೊರಡಲಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನ ಕೆಪಿಟಿ ಬಳಿ ಮನೆಯ ಮೇಲೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಮಹಿಳೆಯೊಬ್ಬರು ಸಿಲುಕಿಕೊಂಡಿದ್ದಾರೆ. ಮೋಹಿನಿ(50) ಎಂಬವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಸ್ತಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದಾರೆ.
ಮಂಗಳೂರು ಭಾರಿ ಮಳೆ ಹಿನ್ನಲೆ ಯಲ್ಲಿ ಬೆಂಗಳೂರು ಕೋರ್ ಕಮಿಟಿ ಸಭೆ ಗೆ ಹೋಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ಗೆ ವಾಪಾಸ್ಸಾಗಿದ್ದಾರೆ. ಯಾವುದೇ ನೆರವು ಬೇಕಾದಲ್ಲಿ ತಕ್ಷಣವೇ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ