LATEST NEWS
ಬೆಂಗಳೂರು ಏರ್ ಶೋ ಬೆಂಕಿ ಅವಘಡ ದೇಶದ್ರೋಹಿಗಳ ಕೈವಾಡದ ಬಗ್ಗೆ ಉನ್ನತ ತನಿಖೆ ಅಗತ್ಯ – ಶೋಭಾ ಕರಂದ್ಲಾಜೆ
ಬೆಂಗಳೂರು ಏರ್ ಶೋ ಬೆಂಕಿ ಅವಘಡ ದೇಶದ್ರೋಹಿಗಳ ಕೈವಾಡದ ಬಗ್ಗೆ ಉನ್ನತ ತನಿಖೆ ಅಗತ್ಯ – ಶೋಭಾ ಕರಂದ್ಲಾಜೆ
ಉಡುಪಿ ಫೆಬ್ರವರಿ 24: ಬೆಂಗಳೂರಿನ ಎರ್ ಶೋ ದಲ್ಲಿ ಬೆಂಕಿ ಅವಘಡಕ್ಕೂ ಕಾಶ್ಮೀರದ ಪುಲ್ವಾಮಾ ಘಟನೆಗೂ ಇರುವ ಲಿಂಕ್ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ,ಈ ಘಟನೆ ಹಿಂದೆ ದೇಶದ್ರೋಹಿಗಳ ಕೈವಾಡ ಇರಬಹುದಾದ ಸಾಧ್ಯತೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಏರ್ ಶೋ ಕೇಂದ್ರ ಸರ್ಕಾರ- ವಿವಿಧ ಇಲಾಖೆಯ ಆಯೋಜನೆ, ಈ ರೀತಿಯಾದ ಬಹುದೊಡ್ಡ ಕಾರ್ಯಕ್ರಮಕ್ಕೆ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಏರ್ ಶೋಗೆ ದೇಶ ವಿದೇಶದಿಂದ ಜನ ಬಂದಿದ್ದಾರೆ. ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಈ ಅವಘಡಕ್ಕೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಏರ್ ಶೋ ಶಿಫ್ಟಾಗುವಾಗ ನಾವು ಧನಿ ಎತ್ತಿದ್ದೆವು, ಇಂತಹ ಘಟನೆಗಳು ಶೋಭೆ ತರುವುದಿಲ್ಲ, ಆದರೆ ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಿದೆ. ಎರ್ ಶೋ ಗೆ ರಕ್ಷಣೆ ಕೊಡಲು ಆಗಿಲ್ಲ ಎಂದರೆ , ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮತಿ ಮೂಲಕ ರೈತರ ಖಾತೆಗೆ 2 ಸಾವಿರ ರೂಪಾಯಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಆರಂಭಿಕ ಈ ಮೊತ್ತ ಭವಿಷ್ಯ ದಲ್ಲಿ ಹೆಚ್ಚಾಗಲಿದ್ದು, ಇದು ರೈತರ ಮೇಲಿನ ಹೊರೆ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು. ಈ ಯೋಜನೆಯಲ್ಲಿ ನೇರವಾಗಿ ರೈತರಿಗೆ ಈ ಹಣ ತಲುಪುತ್ತದೆ. ಇಂತಹ ಅತ್ಯುತ್ತಮವಾದ ಯೋಜನೆ ತಂದಿದ್ದಕ್ಕೆ ಪ್ರಧಾನಿ ಮೋದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.