ಬೆಂಕಿ ಅವಘಡ ಪುಲ್ವಾಮ್ ದಾಳಿಗೆ ಲಿಂಕ್ ಮಾಡುತ್ತಿರುವ ಶೋಭಾ ಕರಂದ್ಲಾಜೆಗೆ ಬುದ್ದಿ ಭ್ರಮಣೆ – ದಿನೇಶ್ ಗೂಂಡೂರಾವ್

ಮಂಗಳೂರು ಫೆಬ್ರವರಿ 24: ಏರ್ ಶೋನಲ್ಲಿ ಬೆಂಕಿ ಅನಾಹುತಕ್ಕೆ ರಾಜ್ಯ ಸರಕಾರದ ವೈಫಲ್ಯವೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರು ಎರ್ ಶೋ ಬೆಂಕಿ ಅನಾಹುತವನ್ನು ಕಾಶ್ಮೀರದ ಪುಲ್ವಾಮಾ ದಾಳಿಗೆ ಲಿಂಕ್ ಮಾಡುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಬುದ್ದಿಭ್ರಮಣೆಯಾಗಿದ್ದು, ಏನು ಮಾತನಾಡುತ್ತಾರೆ ಎಂದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು.

ಬೆಂಗಳೂರು ಎರ್ ಶೋ ಬಗ್ಗೆ ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ ಪುಲ್ವಾಮಾ ದಾಳಿಯ ವೈಫಲ್ಯದ ಬಗ್ಗೆ ಮಾತಾಡಲಿ, ಇಂಟೆಲಿಜೆನ್ಸ್ ವರದಿ ಬಗ್ಗೆ ಪ್ರಧಾನಿ ನರೆಂದ್ರ ಮೋದಿ ಸುಮ್ಮನಿದ್ದರೇಕೆ ಅನ್ನುವುದನ್ನು ಹೇಳಲಿ ಎಂದ ಹೇಳಿದ ಅವರು ಏರ್ ಶೋ ನಡೆಯುವ ಯಲಹಂಕ ವಾಯುನೆಲೆ ಕೇಂದ್ರ ಸುಪರ್ದಿಯಲ್ಲಿದೆ , ಅಲ್ಲಿ ಏನಾದ್ರೂ ವಿಫಲತೆ ಆಗಿದ್ದರೆ ರಕ್ಷಣಾ ಇಲಾಖೆ ವೈಫಲ್ಯ ಅನ್ನಬೇಕಷ್ಟೆ, ರಾಜ್ಯ ಸರಕಾರದ ವೈಫಲ್ಯ ಅಲ್ಲ, ಇಡೀ ಕಾರ್ಯಕ್ರಮಕ್ಕೆ ಸಹಕಾರ ಕೊಡುವುದಷ್ಟೆ ರಾಜ್ಯ ಸರಕಾರದ ಕೆಲಸವಾಗಿದೆ ಎಂದು ಹೇಳಿದರು.

ಶೋಭಾ ಸಂಸದರಾಗಿ ಅವರ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಲಿ, ಏನೂ ಕೆಲಸ ಮಾಡದೆ ಈ ರೀತಿ ಹೇಳಿಕೆಯಿಂದ ಪ್ರಚಾರ ಗಿಟ್ಟಿಸಿಕೊಳ್ತಾರೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

Facebook Comments

comments