ಮಂಗಳೂರಿನಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ

ಮಂಗಳೂರು ಫೆಬ್ರವರಿ 24: ಬಾಲಿವುಡ್ ನ ಖ್ಯಾತ ನಟಿ ಮಾಜಿ ವಿಶ್ವಸುಂದರ್ ಐಶ್ವರ್ಯ ರೈ ತನ್ನ ಪತಿ ಅಭಿಷೇಕ ಬಚ್ಚನ್ ಜೊತೆ ಇಂದು ಮಂಗಳೂರಿಗೆ ಆಗಮಿಸಿದರು.

ಮಂಗಳೂರಿನಲ್ಲಿ ತನ್ನ ಚಿಕ್ಕಪ್ಪ ದೀನನಾಥ ಶೆಟ್ಟಿ ಅವರ ಶ್ರಾದ್ದದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಆಗಮಿಸಿದ್ದಾರೆ.
ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರ ಜೊತೆ ಪತಿ ಅಭಿಷೇಕ್ ಬಚ್ಚನ್ ಸಾಥ್ ನೀಡಿದ್ದರು. ಆದರೆ ಮಗಳು ಆರಾಧ್ಯ ಜೊತೆಗಿರಲಿಲ್ಲ.

ಇತ್ತೀಚೆಗೆ ಐಶ್ವರ್ಯ ರೈ ಅವರ ಚಿಕ್ಕಪ್ಪ ನಿಧನರಾಗಿದ್ದರು. ಐಶ್ವರ್ಯ ರೈ ಅವರ ತವರೂರು ಮಂಗಳೂರು ಆಗಿದ್ದು, ಅವರ ಸಂಬಂಧಿಕರು ಬಹುತೇಕ ಮಂದಿ ಕರಾವಳಿಯಲ್ಲೇ ಇದ್ದಾರೆ ಈ ಹಿನ್ನಲೆಯಲ್ಲಿ ಇಂದು ಮಂಗಳೂರಿನಲ್ಲಿ ನಡೆಯುವ ಶ್ರಾದ್ದದಲ್ಲಿ ಭಾಗವಹಿಸಲು ಐಶ್ವರ್ಯ ರೈ , ಪತಿ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಜೊತೆಗೆ ಮಂಗಳೂರಿಗೆ ಆಗಮಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಕುಟುಂಬಸ್ಥರು ಸ್ವಾಗತಿಸಿ ಶ್ರಾದ್ದಕ್ಕೆ ಕರೆದುಕೊಂಡು ಹೋಗಿದ್ದಾರೆ.

VIDEO

6 Shares

Facebook Comments

comments