LATEST NEWS
ಕರಾವಳಿಯಲ್ಲಿ ಕೆಲವೆಡೆ ಬಾರಿ ಗಾಳಿ ಮಳೆ
ಕರಾವಳಿಯಲ್ಲಿ ಕೆಲವೆಡೆ ಬಾರಿ ಗಾಳಿ ಮಳೆ
ಬಂಟ್ವಾಳ ಎಪ್ರಿಲ್ 26: ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಂದು ಭಾರಿ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು ಎರಡರಿಂದ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಅದರಂತೆ ಇಂದು ಸಂಜೆ ನಂತರ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆ ಬಂದಿದೆ.
ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ಎಡೆ ಬಿಡದೆ ಸುರಿದ ಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಅಡಿಕೆ ಮರಗಳು ನೆಲಕ್ಕುರುಳಿದೆ. ಸುರಿದ ಬಾರೀ ಮಳೆಗೆ ಕೆಲವೊಂದು ಕಡೆಗಳಲ್ಲಿ ನೀರು ಹರಿದುಹೋಗಲು ಸರಿಯಾದ ಚರಂಡಿ ಇಲ್ಲದೆ ಕೊಂಚ ಮಟ್ಟಿಗೆ ಕೃಷಿಕರಿಗೆ ತೊಂದರೆಯೂ ಅಗಿದೆ.