Connect with us

    LATEST NEWS

    ಸಣ್ಣ ಮಳೆಗೆ ಪಂಪ್ ವೆಲ್ ಪ್ಲೈಓವರ್ ನಲ್ಲಿ ಬಿರುಕು

    ಸಣ್ಣ ಮಳೆಗೆ ಪಂಪ್ ವೆಲ್ ಪ್ಲೈಓವರ್ ನಲ್ಲಿ ಬಿರುಕು

    ಮಂಗಳೂರು ಎಪ್ರಿಲ್ 26: ಮೊದಲ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಹೆಸರಾತ ಪಂಪ್ ವೆಲ್ ಪ್ಲೈಓವರ್ ಬಿರುಕು ಬಿಟ್ಟಿದ್ದು ವಾಹನ ಸವಾರರನ್ನು ಆತಂಕಕೀಡು ಮಾಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು-ಉಡುಪಿ ರಸ್ತೆಯ ಪಂಪ್‌ವೆಲ್‌ ಮೇಲ್ಸೇತುವೆ 3 ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿತ್ತು.

    ಸುಮಾರು 600 ಮೀ. ಉದ್ದ ಹಾಗೂ 20 ಮೀ. ಅಗಲವಿರುವ ಈ ಫ್ಲೈಓವರ್‌ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ನಿರ್ಮಾಣವಾಗಿದೆ. ಇಷ್ಟು ಉದ್ದದ ಮೇಲ್ಸೇತುವೆ 10 ವರ್ಷಗಳಿಂದ ಕುಂಟುತ್ತಾ ಸಾಗಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

    ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ತಿಂಗಳಲ್ಲೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗಿತ್ತು. ಎರಡು ಕಡೆಗಳಿಂದಲೂ ಕಾಂಕ್ರೀಟ್‌ ಪ್ಯಾನೆಲ್‌ಗಳನ್ನು ಒಂದರ ಮೇಲೆ ಒಂದರಂತೆ ಸುಮಾರು 4.5 ಮೀ. ಎತ್ತರಕ್ಕೆ ಜೋಡಿಸಿ, ಪ್ಯಾನೆಲ್‌ಗಳ ಹಿಂದಿರುವ ಹುಕ್‌ಗಳಿಗೆ 7 ಮೀ. ಪ್ಲಾಸ್ಟಿಕ್‌ ರೋಪ್‌ ಮಾದರಿಯ ಶೀಟ್‌ಗಳನ್ನು ಹಾಸಿ ಅದರ ಮೇಲೆ ಮಣ್ಣು ಹಾಕಲಾಗಿದೆ.

    ಫ್ಲೈ ಓವರ್‌ನ ಎರಡು ಬದಿಯಲ್ಲೂ ಪ್ಯಾನೆಲ್‌ನ 1 ಅಡಿ ಗ್ಯಾಪ್‌ಗೆ ಜಲ್ಲಿಕಲ್ಲುಗಳನ್ನು ಹಾಕಿ ಫಿಲ್‌ ಮಾಡಲಾಗಿದ್ದು, ಅದರ ಮೇಲೆ ಕಾಂಕ್ರೀಟ್‌ ಫಿನಿಶಿಂಗ್‌ ಮಾಡಲಾಗಿದೆ. ಈ ಎಲ್ಲ ಕಾಮಗಾರಿಗಳು ಕೇವಲ 3 ತಿಂಗಳ ಅಂತರದಲ್ಲಿ ನಡೆದಿದ್ದು, ಆಗಲೇ ಎಲ್ಲರ ಅನುಮಾನಕ್ಕೆ ಕಾರಣವಾಗಿತ್ತು.

    ಶನಿವಾರ ಮಳೆ ಸುರಿದ ಬಳಿಕ ಮೇಲ್ಸೇತುವೆಯ ಇಕ್ಕಡೆಗಳ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರು ತುಂಬಿಕೊಂಡಿದ್ದು ಕೂಡಲೇ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಇದೀಗ ಮೇಲ್ಸೇತುವೆಯ ಮಧ್ಯಭಾಗದ ಎರಡು ರಸ್ತೆ ಹಾಗೂ ತಡೆಗೋಡೆ ಉದ್ದಕ್ಕೆ ಬಿರುಕು ಬಿಟ್ಟಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply