Connect with us

LATEST NEWS

ಮೀನುಗಾರಿಕೆಗೆ ಅವಕಾಶ ನೀಡುವ ನೆಪದಲ್ಲಿ ಜಿಲ್ಲೆಯನ್ನು ಕೊರೊನಾ ಹಾಟ್ ಸ್ಪಾಟ್ ಮಾಡಲು ಹೊರಟ ಜಿಲ್ಲಾಡಳಿತ

ಮೀನುಗಾರಿಕೆಗೆ ಅವಕಾಶ ನೀಡುವ ನೆಪದಲ್ಲಿ ಜಿಲ್ಲೆಯನ್ನು ಕೊರೊನಾ ಹಾಟ್ ಸ್ಪಾಟ್ ಮಾಡಲು ಹೊರಟ ಜಿಲ್ಲಾಡಳಿತ

ಮಂಗಳೂರು ಎಪ್ರಿಲ್ 26: ಮಂಗಳೂರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಬೇಜವಬ್ದಾರಿಯ ತನಕ್ಕೆ ಮಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗುವ ಸಾಧ್ಯತೆ ಎದುರಾಗಿದೆ. ನಗರದ ಹೃದಯ ಭಾಗದಲ್ಲೇ ಈ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೀನು ಖರೀದಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಇಲಾಖೆಗಳು ಮೂಕ ಪ್ರೇಕಕರಾಗಿದ್ದಾರೆ.

 ಮಂಗಳೂರು ನಗರದ ಮೀನುಗಾರಿಕಾ ಬಂದರಿನ ಪ್ರಮುಖ ರಸ್ತೆಯಲ್ಲೇ ಹೊರ ರಾಜ್ಯಗಳಿಂದ ಬರುವ ಮೀನನ್ನು ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಶಾಸಕ ವೇದವ್ಯಾಸ ಕಾಮತ್ ಖುದ್ದು ಸ್ಥಳ ಪರಿಶೀಲನೆ ನಡೆಸಿ ಹೊರ ರಾಜ್ಯಗಳಿಂದ ಆಗಮಿಸುವ ಮೀನು ಲಾರಿಗಳಿಗೆ ರಾತ್ರಿ 11 ರಿಂದ ಅನ್ಲೋಡಿಂಗ್ ಅವಕಾಶ ಕಲ್ಪಿಸಿದ್ದಾರೆ. ಆದರೆ ಅದೇ ಅವಕಾಶ ಈಗ ವಿವಾದಕ್ಕೀಡಾಗಿದ್ದು, ಈ ವ್ಯವಹಾರ ಈಗಾಗಲೇ ಎರಡು ಬಲಿ ಪಡೆದಿರುವ ಮಹಾಮಾರಿ ಕೊರೊನಾದ ಹಾಟ್‌ ಸ್ಪಾಟ್‌ ಆಗುವ ಭೀತಿ ಎದುರಾಗಿದೆ.

ಸಂಜೆ ಆಗುತ್ತಿದಂತೆ ಈ ಪ್ರದೇಶದಲ್ಲಿ 50 ಕ್ಕೂ ಅಧಿಕ ಕಂಟೈನರ್‌ಗಳಲ್ಲಿ ಬರುವ ಹೊರ ರಾಜ್ಯದ ಮೀನು ಖರೀದಿಗೆ ವ್ಯಾಪಾರಸ್ತರು ಮತ್ತು ಸಾರ್ವಜನಿಕರು ಮುಗಿ ಬೀಳುತ್ತಿದ್ದು ಯಾವುದೇ ಮಾಸ್ಕ್‌ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯವಹಾರ ನಡೆಸುತ್ತಿದ್ದು ಕೊರೊನಾದ ಅತಂಕ ಎದುರಾಗಿದೆ.

ಮಧ್ಯರಾತ್ರಿ ವರೆಗೂ ನಡೆಯುವ ಈ ವ್ಯವಹಾರದ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Facebook Comments

comments