Connect with us

  KARNATAKA

  ಹಾಸನ – ಹಾಡುಹಗಲೇ ಶೂಟೌಟ್ – ಇಬ್ಬರು ಸಾವು

  ಹಾಸನ ಜೂನ್ 20 : ಹಾಸನದಲ್ಲೇ ಇಬ್ಬರು ಶೂಟೌಟ್ ಮಾಡಿಕೊಂಡು ಸಾವನಪ್ಪಿದ ಘಟನೆ ನಡೆದಿದ್ದು, ಒಬ್ಬರು ಇನ್ನೊಬ್ಬರಿಗೆ ಗುಂಡು ಹಾರಿಸಿ ನಂತರ ತಾವೂ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಹೇಳಿದ್ದಾರೆ.


  ಹೊಯ್ಸಳ ನಗರದ ಮುಖ್ಯ ರಸ್ತೆಯಲ್ಲಿಯೇ ನಿಸ್ಸಾನ್ ಟರಾನೋ ಕಾರು ನಿಂತಿದ್ದು, ಅದರ ಎದುರಿನಲ್ಲಿ ಇಬ್ಬರ ಶವಗಳು ಬಿದ್ದಿವೆ. ಕೊಲೆಯಾದವರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಾಹ್ನದ ವೇಳೆಗೆ ಕಾರಿನಲ್ಲಿ ನಿವೇಶನ ನೋಡಲು ಇಬ್ಬರು ಬಂದಿದ್ದರು. ಇಬ್ಬರೂ ಮಾತನಾಡಿಕೊಂಡು ಕಾರಿನತ್ತ ಬಂದಿದ್ದಾರೆ. ನಂತರ ಗುಂಡಿನ ಶಬ್ದ ಕೇಳಿ ಬಂದಿದೆ. ಅಕ್ಕಪಕ್ಕದವರು ಹೊರಗೆ ಬಂದು ನೋಡಿದಾಗ, ಒಂದು ಶವ ಹೊರಗಡೆ ಬಿದ್ದಿತ್ತು. ಇನ್ನೊಂದು ಶವ ಕಾರಿನಲ್ಲಿತ್ತು’ ಎಂದು ವಿವರಿಸಿದರು. ‘ನಿವೇಶನ ವಿಚಾರದಲ್ಲಿ ಜಗಳ ಆಗಿರಬಹುದು. ಇದರಿಂದಾಗಿ ಒಬ್ಬರು ಶೂಟ್‌ ಮಾಡಿ ಕೊಲೆ ಮಾಡಿ, ಮತ್ತೊಬ್ಬರು ಕಾರಿನಲ್ಲಿ ಕುಳಿತು ಶೂಟ್‌ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ತನಿಖೆ ಮಾಡುತ್ತಿದ್ದು, ನಂತರವಷ್ಟೇ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದರು.

  ‘ಕಾರಿನಲ್ಲಿ ಪಿಸ್ತೂಲ್‌ ಸಿಕ್ಕಿದೆ. ಕಾರು ಮೈಸೂರು ನೋಂದಣಿ ಹೊಂದಿದ್ದು, ಅದನ್ನು ಮಾರಾಟ ಮಾಡಲಾಗಿದೆಯೇ? ಇಬ್ಬರೂ ಎಲ್ಲಿಯವರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದಿದ್ದು, ಅವರು ಪರಿಶೀಲನೆ ನಡೆಸಿದ ನಂತರವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply