Connect with us

    FILM

    ಬಿಹಾರ ಮೂಲದ ವೈದ್ಯೆಯ ಜೊತೆ ಸಪ್ತಪದಿ ತುಳಿದ ನಟ ಪ್ರಭುದೇವ

    ಮುಂಬೈ ನವೆಂಬರ್ 22: ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಲಾಕ್ ಡೌನ್ ನಲ್ಲಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ, ಮುಂಬೈನ ಫಿಸಿಯೊಥೆರಪಿಸ್ಟ್ ಡಾ. ಹಿಮಾನಿ ಎಂಬ ಬಿಹಾರ ಮೂಲದ ವೈದ್ಯೆಯನ್ನು ವರಿಸಿದ್ದು, ಪ್ರಭುದೇವ ಅವರ ಸಹೋದರ ನೃತ್ಯ ನಿರ್ದೇಶಕ ಸುಂದರಂ ಈ ಮದುವೆ ವಿಷಯವನ್ನು ಖಚಿತಪಡಿಸಿದ್ದಾರೆ.


    ಕೊರೊನಾ ಲಾಕ್ ಡೌನ್ ಸಂದರ್ಭ ಮೇನಲ್ಲಿ ನಡೆದ ಇವರ ವಿವಾಹ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಗಳಷ್ಟೇ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆಯ ಬಗ್ಗೆ ಪ್ರಭುದೇವ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.


    ಈ ಹಿಂದೆ ಈ ನಟ ರಾಮಲತಾ ಎಂಬವರನ್ನು ದುವೆಯಾಗಿದ್ದರು. ಆದರೆ 2011ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ದಕ್ಷಿಣ ಭಾರತದ ಖ್ಯಾತ ನಟಿ ನಯನಾತಾರಾ ಜೊತೆ ಕೂಡ ಕೆಲ ಕಾಲ ಡೇಟಿಂಗ್ ನಡೆಸಿದ್ದರು ಪ್ರಭುದೇವ. ನಂತರ ಈ ಜೋಡಿ ಬೇರಾಗಿದ್ದರು.


    ನಯನತಾರಾ ಅವರನ್ನು ಬಹುವಾಗಿ ಪ್ರೀತಿಸಿದ್ದ ಪ್ರಭುದೇವ ಅವರನ್ನು ಮದುವೆಯಾಗುವ ಯೋಚನೆ ಮಾಡಿದ್ದರು. ಆದರೆ ಅಷ್ಟರಲ್ಲೇ ಈ ಜೋಡಿ ಬೇರಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply