Connect with us

LATEST NEWS

ಸಿನೆಮಾ ರಂಗ ಬಿಟ್ಟು ಮುಫ್ತಿ ಅನಾಸ್ ರೊಂದಿಗೆ ವಿವಾಹವಾದ ನಟಿ ಸನಾಖಾನ್

ನವದೆಹಲಿ: ಕಲರ್ ಪುಲ್ ದುನಿಯಾ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದ್ದ ಬಾಲಿವುಡ್ ನಟಿ ಸನಾಖಾನ್ ಈಗ ಗುಜರಾತ್ ಮೂಲದ ಮುಫ್ತಿ ಅನಾಸ್ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ಸನಾಖಾನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಫೋಟೋ ಹಾಗೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ವಿವಾಹದ ಫೋಟೋಗಳನ್ನು ನಟಿ ಸನಾಖಾನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಂಡಿರುವ ಸನಾಖಾನ್ ಅವರು, ಅಲ್ಲಾರಿಂದ ಇಬ್ಬರೂ ಪ್ರೀತಿಸಿದೆವು. ಅಲ್ಲಾರಿಂದಾಗಿ ಮದುವೆಯಾದೆವು. ಈ ಜಗತ್ತಿನಲ್ಲಿ ಎಲ್ಲಾ ನಮ್ಮಿಬ್ಬರನ್ನೂ ಒಟ್ಟಾಗಿ ಇಡಲಿ ಎಂದು ಹೇಳಿಕೊಂಡಿದ್ದಾರೆ.


ಕೆಲ ದಿನಗಳ ಹಿಂದಷ್ಟೇ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ಸನಾಖಾನ್ ಅವರು, ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನೂ ನೀಡಿದೆ. ಆದರೆ, ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಗಿದೆ. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ ಎಂದು ಹೇಳಿದ್ದರು.

Facebook Comments

comments