LATEST NEWS
ಫೆವಿಕಾಲ್ ಯಕ್ಷಗಾನ ಜಾಹಿರಾತು ವಿರುದ್ದ ಆಕ್ರೋಶ – ಜಾಹಿರಾತು ಹಿಂಪಡೆದು ಕರಾವಳಿಗರ ಬಹಿರಂಗ ಕ್ಷಮೆಗೆ ಶಾಸಕ ಕಾಮತ್ ಆಗ್ರಹ

ಮಂಗಳೂರು ನವೆಂಬರ್ 22 : ಫೆವಿಕಾಲ್ ಜಾಹಿರಾತಿಯಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಅವವಾನ ಮಾಡಲಾಗಿದ್ದು, ಫೆವಿಕಾಲ್ ಸಂಸ್ಥೆ ಕೂಡಲೇ ಜಾಹಿರಾತನ್ನು ಹಿಂಪಡೆದು ಕರಾವಳಿಗರ ಕ್ಷಮೆ ಕೇಳಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಫೆವಿಕಾಲ್ ಸಂಸ್ಥೆಯವರು ತಮ್ಮ ಅಂಟಿನ ಉತ್ಪನ್ನದ ಟಿ.ವಿ ಜಾಹೀರಾತಿನಲ್ಲಿ ಯಕ್ಷಗಾನದ ದೃಶ್ಯಗಳನ್ನು ಅಸಂಭದ್ದವಾಗಿ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಈ ಜಾಹೀರಾತಿನ ವಿಡಿಯೋ ತುಣುಕುಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಯಕ್ಷಗಾನದ ಆಶಯಗಳಿಗೆ ವಿರುದ್ದವಾಗಿದ್ದು, ಯಕ್ಷಗಾನವನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಥಕ್ಕಳಿಯ ಹಿಮ್ಮೇಳನದ ಸದ್ದು ಯಕ್ಷಗಾನದ ರಂಗಸ್ಥದಲ್ಲಿ ತೆಂಕು ತಿಟ್ಟಿನ ಪ್ರದರ್ಶನ ಆರಂಭವಾಗುತ್ತದೆ, ಇದೇ ವೇಳೆ ರಂಗಸ್ಥಳದ ಸಿಂಹಾಸನದಲ್ಲಿ ವೇಷಧಾರಿ ಕುಳಿತುಕೊಳ್ಳುವಾಗ ಅದು ಕುಸಿದು ಬೀಳುತ್ತದೆ. ಆಗ ಸಿಟ್ಟಿನಿಂದ ವೇಷಧಾರಿ ಅರಚುತ್ತಾ ಎದುರು ಇರುವ ವೇಷಧಾರಿ ಸಹಿತ ಹಿಮ್ಮೇಳನದವರನ್ನು ಅಟ್ಟಾಡಿಸುತ್ತಾನೆ. ಈ ಮೂಲಕ ಸಂಸ್ಥೆಯ ಅಂಟಿನ ಉತ್ಪನ್ನಕ್ಕೆ ಯಾವುದೂ ಸರಿಸಾಟಿ ಇಲ್ಲ ಎಂದು ಸಾರುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಇನ್ನು ಈ ಜಾಹೀರಾತಿಯಲ್ಲಿ ಕಾಣಿಸಿಕೊಂಡ ಕಲಾವಿದರು ಪೈಕಿ ಕೆಲವು ವೃತ್ತಿಪರ ಕಲಾವಿದರೂ ಇದ್ದಾರೆ ಎಂದು ನೆಟ್ಟಿಗರು ಗುರುತಿಸಿದ್ದಾರೆ. ಈಗಾಗಲೇ ಈ ಜಾಹೀರಾತಿನ ವಿರುದ್ದ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಜಾಹೀರಾತನ್ನು ನಿರ್ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಈ ಜಾಹೀತಾರು ಕರಾವಳಿಯ ಯಕ್ಷಗಾನ ಕಲೆಗೆ ಮಾಡಿದ ಅವಮಾನವಾಗಿದ್ದು, ಜಾಹೀರಾತನ್ನು ಹಿಂಪಡೆದು ಕರಾವಳಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.