Connect with us

FILM

ಮಾಲ್ಡಿವ್ಸ್‌ನಲ್ಲಿ ಶಾನ್ವಿ ಶ್ರೀವಾಸ್ತವ್ ಹಾಟ್ ಅವತಾರ

ಬೆಂಗಳೂರು: ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಿನೆಮಾ ನಟಿಯರು ಈಗ ಜಾಲಿ ಮೂಡ್ ನಲ್ಲಿದ್ದು, ಬಹುತೇಕ ನಟ ನಟಿಯರು ಮಾಲ್ಡೀವ್ಸ್ ನ ಬೀಚ್ ಗಳತ್ತ ಮುಖ ಮಾಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.


ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಲಕ್ಷ್ಮೀ ಅವತಾರ ತಾಳಿದ್ದ ಶಾನ್ವಿ, ತಮ್ಮ ವಿಶಿಷ್ಟ ನಟನೆ ಮೂಲಕವೇ ಪ್ರೇಕ್ಷಕರನ್ನು ಸೆಳೆದಿದ್ದರು. ಈಗ ಬಿಡುವಿನ ಹಿನ್ನಲೆ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡಿವ್ಸ್‍ನ ಕಡಲ ಕಿನಾರೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ವಿಡಿಯೋ ಹಾಗೂ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.


ಲಾಕ್‍ಡೌನ್ ಬಳಿಕ ಮಾಲ್ಡಿವ್ಸ್ ನಟಿ ಮಣಿಯರ ಹಾಟ್‍ಸ್ಪಾಟ್ ಎನ್ನುವಂತಾಗಿದ್ದು, ಇತ್ತೀಚೆಗೆ ಕಾಜಲ್ ಸಹ ತಮ್ಮ ಹನಿಮೂನ್‍ಗೆ ಮಾಲ್ಡಿವ್ಸ್‍ಗೆ ತೆರಳಿದ್ದರು. ಅಲ್ಲದೆ ನಟಿ ಪ್ರಣಿತಾ ಸುಭಾಶ್ ಸಹ ಮಾಲ್ಡಿವ್ಸ್‍ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಶಾನ್ವಿ ಶ್ರೀವಾಸ್ತವ ಸಹ ಕಡಲ ಕಿನಾರೆಯಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.