LATEST NEWS
ಕರಾವಳಿಯಲ್ಲಿ ಗುಡ್ ಫ್ರೈಡೇ ಆಚರಣೆ : ಚರ್ಚುಗಳಲ್ಲಿ ವಿಶೇ಼ಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಭಕ್ತರು

ಕರಾವಳಿಯಲ್ಲಿ ಗುಡ್ ಫ್ರೈಡೇ ಆಚರಣೆ : ಚರ್ಚುಗಳಲ್ಲಿ ವಿಶೇ಼ಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಭಕ್ತರು
ಮಂಗಳೂರು, ಮಾರ್ಚ್ 30 : ಇಂದು ಗುಡ್ ಫ್ರೈಡೇ. ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನ.
ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮತ್ತು ಮಾನವ ಪಾಪ ವಿಮೋಚನೆಗಾಗಿ ಶಿಲುಬೆಯ ಕ್ರೂರ ಮರಣವನ್ನಪ್ಪಿದ ದೇವ ಪುತ್ರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ಪವಿತ್ರ ದಿನವನ್ನು ನಾಡಿನಾದ್ಯಂತ ಭಕ್ತಿಯಿಂದ ಆಚರಿಚಲಾಗುತ್ತಿದೆ.

ಕರಾವಳಿ ನಗರಿ ಮಂಗಳೂರಿನಲ್ಲೂ ಕ್ರೈಸ್ತ ಭಾಂಧವರು ಈ ಪವಿತ್ರ ಶುಕ್ರವಾರವನ್ನು ಭಕ್ತಿ ಮತ್ತು ಶೃಧ್ದೆಯಿಂದ ಆಚರಿಸಿದರು.
ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ಚರ್ಚುಗಳಿಗೆ ತೆರಳಿ ವಿಶೇಷ ಪಾರ್ಥನೆಯಲ್ಲಿ ತೊಡಗಿಕೊಂಡರು.
ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಗಳನ್ನು ಸ್ಮರಿಸಿ ನೆನಪಿಸಿಕೊಳ್ಳುವ ಶಿಲುಬೆ ಹಾದಿಯಲ್ಲಿ ಪಾಲ್ಗೊಂಡರು.ಕ್ರೈಸ್ತರ ಪವಿತ್ರ ಕಪ್ಪು ದಿನಗಳ ಆಚರಣೆಯ ಅಂಗವಾಗಿ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ‘ಶಿಲುಬೆಯ ಹಾದಿ’ ವಿಶೇಷ ಪ್ರಾರ್ಥನಾ ವಿಧಿ ನಡೆಯಿತು.
ಅನೇಕ ಕ್ರೈಸ್ತ ಧರ್ಮಗುರುಗಳು ಹಾಗೂ ನೂರಾರು ಭಕ್ತರು ಈ ವಿಶೇಷ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು. ಶುಭ ಶುಕ್ರವಾರದಂದು ಯೇಸು ಕ್ರಿಸ್ತ ಶಿಲುಬೆ ಏರುವ ನೆನಪಿಗಾಗಿ ಈ ಪೂಜಾ ವಿಧಿಯನ್ನು ನಡೆಸಲಾಗುತ್ತದೆ.
ಯೇಸು ಕ್ರಿಸ್ತನು ತ್ಯಾಗ ಮಾಡಿ ತನ್ನನ್ನು ತಾನು ಅರ್ಪಣೆ ಮಾಡಿಕೊಂಡ ದಿನವೇ ಶುಭ ಶುಕ್ರವಾರ.
ತಾನು ಕಲ್ಟಾರ ಎನ್ನುವ ಸ್ಥಳದಲ್ಲಿ ಗೋಲ್ಗೊಥ ಶಿಖರದ ಮೇಲೆ ಶಿಲುಬೆಯಲ್ಲಿ ನಿಕೃಷ್ಟ ಮರಣವನ್ನು ಹೊಂದಿದ ಈ ದಿನದಲ್ಲಿ ಸರ್ವರ ಪಾಪಕ್ಕೆ ಸಲ್ಲಬೇಕಾದ ಸಾಲವನ್ನು ಕ್ರಿಸ್ತನು ಸಮರ್ಪಿಸಿದ್ದಾನೆ.
ಆದುದರಿಂದ ಈ ದಿನ ಸರ್ವರಿಗೂ ಪಾಪ ವಿಮೋಚನೆ ಒದಗಿದ, ಬಿಡುಗಡೆಯನ್ನು ಕೊಟ್ಟ ಶುಭ ದಿನವಾಗಿದೆ.