LATEST NEWS
ಗೂಗಲ್ ಪ್ರಮಾಣ ಪತ್ರ ಪಡೆದ ಮಂಗಳೂರಿನ ವಿಧ್ಯಾರ್ಥಿ
ಗೂಗಲ್ ಪ್ರಮಾಣ ಪತ್ರ ಪಡೆದ ಮಂಗಳೂರಿನ ವಿಧ್ಯಾರ್ಥಿ
ಮಂಗಳೂರು ಮಾರ್ಚ್ 30: ಇಂಟರ್ನೆಟ್ ದಿಗ್ಗಜ ಗೂಗಲ್ ಸಂಸ್ಥೆ ನಡೆಸಿದ ಆನ್‌ಲೈನ್ ಪರೀಕ್ಷೆಯನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಿದ ಮಂಗಳೂರಿನ ವಿಧ್ಯಾರ್ಥಿಗೆ ಗೂಗಲ್ ಸಂಸ್ಥೆ ಪ್ರಮಾಣ ಪತ್ರ ನೀಡಿದೆ.
ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿಎ ಪದವಿ ಶಿಕ್ಷಣ ಪಡೆಯುತ್ತಿರುವ ಮೂಸಾ ಫಾಝಿಲ್ ಈ ಸಾದನೆ ಮಾಡಿದ ವಿಧ್ಯಾರ್ಥಿ. ಗೂಗಲ್ ನಡೆಸುವ ‘ಆನ್‌ಲೈನ್ ಮಾರ್ಕೆಟಿಂಗ್ ಫಂಡಮೆಂಟಲ್ಸ್ ಕ್ವಾಲಿಫಿಕೇಷನ್’ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಪರೀಕ್ಷೆಯಲ್ಲಿ 106 ಪಾಠಗಳಿಗೆ ಯಶಸ್ವಿಯಾಗಿ ಉತ್ತರ ಬರೆದಿರುವ ಅವರು, ಗೂಗಲ್ ಡಿಜಿಟಲ್ ಅಲ್‌ಲಾಕ್ಡ್‌ನ 26 ಬ್ಯಾಜ್‌ಗಳನ್ನು ಅನ್‌ಲಾಕ್ ಮಾಡಿದ್ದಾರೆ. ಗೂಗಲ್ ಡಿಜಟಲ್ ಅನ್‌ಲಾಕ್ಡ್ ಅಂತಿಮ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ, ಗೂಗಲ್ ಸರ್ಟಿಫಿಕೇಟ್ ತನ್ನದಾಗಿಸಿದ್ದಾರೆ.
‘ಫೇಸ್‌ಬುಕ್‌ನಲ್ಲಿ ಬಂದಿದ್ದ ನೋಟಿಫಿಕೇಶನ್ ಆಧಾರದಲ್ಲಿ ಗೂಗಲ್ ಡಿಜಿಟಲ್ ಅನ್‌ಲಾಕ್ಡ್ ಪರೀಕ್ಷೆಯನ್ನು ನಾಲ್ಕು ದಿನಗಳ ಅಧ್ಯಯನದ ಬಳಿಕ ಮೊಬೈಲ್ ಮೂಲಕವೇ ಬರೆದು ಉತ್ತೀರ್ಣರಾಗಿದ್ದಾರೆ.
ಈ ಪರೀಕ್ಷೆ ಮಾರ್ಕೆಟಿಂಗ್ ಫಂಡಮೆಂಟಲ್ಸ್‌ನ ಸರ್ಚ್, ಇಮೇಲ್, ಸೋಶಿಯಲ್ ಮೀಡಿಯಾ, ಡಿಸ್‌ಪ್ಲೇ, ವೀಡಿಯೊ, ಈ-ಕಾಮರ್ಸ್, ಜಿಇಒ ಟಾರ್ಗೆಟಿಂಗ್ ಆ್ಯಂಡ್ ಎನಲಿಟಿಕ್ಸ್‌ನ 23 ಮೊಡ್ಯೂಲ್‌ಗಳನ್ನು ಗೂಗಲ್ ಡಿಜಿಟಲ್ ಆನ್‌ಲಾಕ್ಡ್ ಕೋರ್ಸ್ ಒಳಗೊಂಡಿದೆ. ಪ್ರತಿ ಪರೀಕ್ಷೆಗೆ 5-12 ಪ್ರಶ್ನೆಗಳಿದ್ದವು. ಆಯ್ಕೆ ಮಾದರಿಯ ಪ್ರಶ್ನೆಗಳಿಗೆ ಗುರುತು ಮಾಡುವ ಮೂಲಕ ಉತ್ತರಿಸಲಾಗುತ್ತದೆ.
ಫಾಝಿಲ್ ವಿದ್ಯಾರ್ಥಿಯಾಗಿದ್ದರೂ ಫಾಝಿಲ್ ಕ್ರಿಯೇಶನ್ಸ್ ಎಂಬ ಗ್ರಾಫಿಕ್ ಡಿಸೈನ್ ಸಂಸ್ಥೆಯ ಸಿಇಒ ಆಗಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಎಚ್‌ಐಎಫ್ ಸಂಸ್ಥೆ, ವಿಶೇಷ ಚಟುವಟಿಕೆಗಳಿಗಾಗಿ ಎಸ್‌ಇಬಿ ಸಂಘಟನೆ, ಯುನೈಟೆಡ್ ಫಾರ್ ಎ ಬೆಟರ್ ಮಂಗಳೂರು ಸಂಘಟನೆ ಇತ್ಯಾದಿಗಳು ಅಭಿನಂದಿಸಿವೆ. ಅವರು ಉದ್ಯಮಿ ಮೊಹಮ್ಮದ್ ಸಲೀಂ ಮತ್ತು ಆಮಿನಾ ದಂಪನಿ ಪುತ್ರ.
You must be logged in to post a comment Login