LATEST NEWS
ಸುಳ್ಳುಸುದ್ದಿ ಪ್ರಕಟ: ಪೋಸ್ಟ್‌ಕಾರ್ಡ್.ನ್ಯೂಸ್ ಮಾಲಿಕ ಮಹೇಶ್ ಬಂಧನ
ಸುಳ್ಳುಸುದ್ದಿ ಪ್ರಕಟ: ಪೋಸ್ಟ್‌ಕಾರ್ಡ್.ನ್ಯೂಸ್ ಮಾಲಿಕ ಮಹೇಶ್ ಬಂಧನ
ಬೆಂಗಳೂರು, ಮಾರ್ಚ್ 30 : ಪೋಸ್ಟ್‌ಕಾರ್ಡ್ ಡಾಟ್ ನ್ಯೂಸ್ ಮಾಲೀಕ ಮಹೇಶ್ ವಿಕ್ರಮ್ ಹೆಗಡೆಯವರನ್ನು ಪೋಲಿಸರು ಬಂಧಿಸಿದ್ದಾರೆ.
ಸಮಾಜದಲ್ಲಿ ಕೋಮು ಸಂಘರ್ಷ ಹುಟ್ಟು ಹಾಕುವಂತ ಸುಳ್ಳು ಸುದ್ದಿ ಪ್ರಕಟಿಸಿದಕ್ಕಾಗಿ ಸಿಸಿಬಿ ಪೊಲೀಸರು ಮಹೇಶ್ ವಿಕ್ರಮ್ ಹೆಗಡೆ ಬಂಧಿಸಿದ್ದಾರೆ.
ಒಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಮಹೇಶ್ ಹೆಗ್ಡೆ ವಿರುದ್ಧ ಎರಡು ದೂರುಗಳು ದಾಖಲಾಗಿವೆ.
ಮಾರ್ಚ್ 18 ರಂದು ಜೈನ ಮುನಿ ಉಪಾಧ್ಯಾಯ ಮಾಯಾಂಕ್ ಸಾಗರ್ ಜೀ ಅವರ ಮೇಲೆ ಮುಸ್ಲಿಮ್ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ’ ಸಿದ್ದರಾಮಯ್ಯ ಅವರ ಕರ್ನಾಟಕದಲ್ಲಿ ಯಾರೋಬ್ಬರಿಗೂ ರಕ್ಷಣೆ ಇಲ್ಲ ಎನ್ನುವಂತ ಸುದ್ದಿ ಹಾಕಿ ಫೋಟೋ ಜೊತೆ ಪ್ರಕಟಿಸಿದ್ದರು.
ಈ ಸುಳ್ಳು ಸುದ್ದಿ ಸಂಬಂಧ ಗಫರ್ ಬೇಗ್ ಎಂಬುವವರು ದೂರು ನೀಡಿದ್ದರು.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆಗಳ ಆಧಾರದಲ್ಲಿ ಗುಂಪುಗಳ ಮಧ್ಯೆ ದ್ವೇಷ ಬಿತ್ತುವುದು ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂಥ ಕೃತ್ಯಗಳನ್ನೆಸಗುವುದು),
295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ) ಮತ್ತು 120ಬಿ (ಅಪರಾಧ ಸಂಚು) ಅನ್ವಯ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗೌರವ್ ಪ್ರಧಾನ್ ಹಾಗೂ ದೀಪಕ್ ಶೆಟ್ಟಿ ಎಂಬುವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಾ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯವರಾದ ಮಹೇಶ್ ಅವರು ಬಲ ಪಂಥೀಯ ಸುದ್ದಿಗಳನ್ನು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸುತ್ತಿದ್ದು, ಇದು ಅನೇಕ ಚರ್ಚೆಗಳಿಗೆ ಕಾರಣವಾಗಿತ್ತು.
You must be logged in to post a comment Login