Connect with us

    LATEST NEWS

    ‘ಜೆಂಡರ್ ರಿವೀಲ್ ಪಾರ್ಟಿ’ : ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುಟ್ಯೂಬರ್ ಇರ್ಫಾನ್

    ತಮಿಳುನಾಡು: ಹುಟ್ಟಲಿರುವ ತನ್ನ ಮಗುವಿನ ಲಿಂಗವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ನಂತರ ತಮಿಳು ಯೂಟ್ಯೂಬರ್ ಇರ್ಫಾನ್ ವಿವಾದಕ್ಕೆ ಸಿಲುಕಿದ್ದಾರೆ. ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಭಾರತದಲ್ಲಿ ಕಾನೂನುಬಾಹಿರ ಮತ್ತು ಶಿಕ್ಷಾರ್ಹವಾಗಿದೆ. ಆದರೆ ಯುಟ್ಯೂಬರ್ ಇರ್ಫಾನ್ ದುಬೈನಲ್ಲಿ ಲಿಂಗಪತ್ತೆ ಪರೀಕ್ಷೆ ಮಾಡಿಸಿದ್ದು ಅದನ್ನು ಬಹಿರಂಗಪಡಿಸಿದ್ದಕ್ಕೆ ಕಾನೂನು ಕ್ರಮ ಎದುರಿಸಲಿದ್ದಾರೆ.

    ತಮಿಳುನಾಡು ಆರೋಗ್ಯ ಇಲಾಖೆ ಆತನ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗಿದೆ. ಇರ್ಫಾನ್ ಮತ್ತು ಅವರ ಪತ್ನಿ ಆಲಿಯಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹುಟ್ಟಲಿರುವ ತಮ್ಮ ಮಗುವಿನ ಲಿಂಗ ಬಹಿರಂಗಪಡಿಸುವ ಎರಡು ವೀಡಿಯೊಗಳನ್ನು ಅಪ್ ಲೋಡ್ ಮಾಡಿದ್ದಾರೆ. ದಂಪತಿಗಳು ಆಸ್ಪತ್ರೆಗೆ ಭೇಟಿ ನೀಡುವುದು, ವೈದ್ಯಕೀಯ ವೃತ್ತಿಪರರೊಂದಿಗೆ ಸಂವಹನ ನಡೆಸುವುದು ಮತ್ತು ಆಲಿಯಾ ಲಿಂಗಪತ್ತೆ ಪರೀಕ್ಷೆಗೆ ಒಳಗಾಗುವುದನ್ನು ಮೊದಲ ವೀಡಿಯೊ ತೋರಿಸುತ್ತದೆ.

    ಗಮನಾರ್ಹವಾಗಿ ಭಾರತದಲ್ಲಿ ಭ್ರೂಣದ ಲಿಂಗಪತ್ತೆ ಕಾನೂನುಬಾಹಿರವಾಗಿದ್ದರೂ, ಪರೀಕ್ಷೆಯನ್ನು ನಡೆಸಿದ ದುಬೈನಲ್ಲಿ ಇದು ಕಾನೂನುಬದ್ಧವಾಗಿದೆ ಎಂದು ಇರ್ಫಾನ್ ಮೊದಲ ವಿಡಿಯೋ ಆರಂಭದಲ್ಲಿ ಒಪ್ಪಿಕೊಂಡಿದ್ದಾರೆ. ಎರಡನೇ ವಿಡಿಯೋದಲ್ಲಿ ‘ಜೆಂಡರ್ ರಿವೀಲ್ ಪಾರ್ಟಿ’ ಮಾಡಿದ್ದು ಅದರಲ್ಲಿ ನಟಿ ಮತ್ತು ‘ಬಿಗ್ ಬಾಸ್ ತಮಿಳು 7’ ಮಾಯಾ ಎಸ್ ಕೃಷ್ಣನ್ ಸೇರಿದಂತೆ ಇರ್ಫಾನ್ ದಂಪತಿ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದಾರೆ. ಎರಡೂ ವೀಡಿಯೊಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿವೆ.

    ವೀಡಿಯೊಗಳನ್ನು ನಂತರ ಅವರ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಲಾಗಿದೆ. ಈ ಕೃತ್ಯವು ಲಿಂಗ ಆಯ್ಕೆಯ ನಿಷೇಧ ಕಾಯಿದೆ ಎಂದೂ ಕರೆಯಲಾಗುವ ಪ್ರೀ-ಕಾನ್ಸೆಪ್ಶನ್ ಮತ್ತು ಪ್ರಿ-ನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ (ಪಿಸಿಪಿಎನ್‌ಡಿಟಿ) ಆಕ್ಟ್ ನಡಿ ಬರುತ್ತದೆ. 1994 ರಲ್ಲಿ ಭಾರತೀಯ ಸಂಸತ್ತು ಜಾರಿಗೆ ತಂದ ಈ ಕಾಯಿದೆಯು ಗರ್ಭಧಾರಣೆಯ ನಂತರ ಭ್ರೂಣದ ಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಎಂದು ಹೇಳಿದೆ

    Share Information
    Advertisement
    Click to comment

    You must be logged in to post a comment Login

    Leave a Reply