BELTHANGADI
ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜಾ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಬೆಳ್ತಂಗಡಿ ಮೇ 22: ಎರಡೆರಡು ಎಫ್ಐಆರ್ ದಾಖಲಾದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ಅವರನ್ನು ಅರೆಸ್ಟ್ ಮಾಡಲು ಹೋಗಿ ಇಂದು ಇಡೀ ದಿನ ನಡೆದ ಹೈಡ್ರಾಮಾದ ಬಳಿಕ ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ.
ಹರೀಶ್ ಪೂಂಜಾ ಅವರ ಮೇಲೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ಪೊಲೀಸರು ಅರೆಸ್ಟ್ ಮಾಡಲು ಇಂದು ಹರೀಶ್ ಪೂಂಜಾ ಅವರ ಮನೆಗೆ ಬಂದಿದ್ದುರು, ಈ ವೇಳೆ ನೂರಾರು ಕಾರ್ಯಕ್ರರ್ತರು ಮನೆ ಮುಂದೆ ಸೇರಿ ದೊಡ್ಡ ಡ್ರಾಮಾವೇ ನಡೆದು ಹೋಗಿತ್ತು. ಬಳಿಕ ಪೊಲೀಸರು ಹರೀಶ್ ಪೂಂಜಾ ಅವರಿಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದರು. ಅದರಂತೆ ರಾತ್ರಿ ಹರೀಶ್ ಪೂಂಜಾ ಅವರು ತಮ್ಮ ವಕೀಲರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಈ ವೇಳೆ ಶಾಸಕರಾದ ವೇದವ್ಯಾಸ್ ಕಾಮತ್, ಸುನಿಲ್ ಕುಮಾರ್ ಜೊತೆಗಿದ್ದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login