Connect with us

    LATEST NEWS

    ಗೌರಿ ಲಂಕೇಶ್ ಹತ್ಯೆ ಹಂತಕರ ರೇಖಾಚಿತ್ರ ಬಿಡುಗಡೆಯಲ್ಲೂ ರಾಜಕೀಯ

    ಗೌರಿ ಲಂಕೇಶ್ ಹತ್ಯೆ ಹಂತಕರ ರೇಖಾಚಿತ್ರ ಬಿಡುಗಡೆಯಲ್ಲಿ ರಾಜಕೀಯ

    ಉಡುಪಿ ಅಕ್ಟೋಬರ್ 15: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಂತಕರ ರೇಖಾಚಿತ್ರ ಬಿಡುಗಡೆಯಲ್ಲಿ ರಾಜಕೀಯ ಮಾಡಲಾಗಿದೆ ಎಂದು ಪೊಲೀಸರು ಮತ್ತು ರಾಜ್ಯ ಸರಕಾರದ ವಿರುದ್ದ ವಿಹಿಂಪ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕಿಡಿಕಾರಿದ್ದಾರೆ.

    ಉಡುಪಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಗೌರಿ ಲಂಕೇಶ್ ಹತ್ಯೆ ಆರೋಪಿಗಳ ರೇಖಾಚಿತ್ರದಲ್ಲಿ ಕುಂಕುಮ ಹಾಕಿ ಶಂಕಿತನ ರೇಖಾಚಿತ್ರ ಬಿಡುಗಡೆ ಮಾಡಿದ್ದರ ಹಿನ್ನಲೆಯಲ್ಲಿ ಕಾಂಗ್ರೇಸ್ ಸರಕಾರ ರಾಜಕೀಯ ಇದೆ ಎಂದು ಅವರು ಹೇಳಿದರು. ಗೌರಿ ಲಂಕೇಶ್ ಹತ್ಯೆ ವಿಚಾರ ನಮಗೂ ದುಃಖ ತಂದಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದಾಗಿನಿಂದಲೂ ರಾಜ್ಯದಲ್ಲಿ ಸಂಘ ಪರಿವಾರದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

    ಕಲ್ಬುರ್ಗಿ ಹತ್ಯೆ ನಡೆದಾಗಲೂ ಸಂಘ ಪರಿವಾರವನ್ನು ಟಾರ್ಗೆಟ್ ಮಾಡಿದ್ದರು. ಆದರೆ ಇದುವರೆಗೂ ಅದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಬಜರಂಗದಳ ನಾಶದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ತನಿಖೆ ನಡೆಸಲಿ ಸತ್ಯ ಹೊರಬರುತ್ತದೆ ಅಂತ ಹೇಳಿದರು.

    ಮೌಢ್ಯ ಪ್ರತಿಬಂಧಕ ವಿಧೇಯ ಜಾರಿ ವಿಚಾರದಲ್ಲಿಯೂ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದ್ದು. ಹಿಂದೂ ಧರ್ಮದಲ್ಲಿ ಮೌಢ್ಯವಿಲ್ಲ ಆದರೆ ಅದು ಇರೋದು ಕ್ರೈಸ್ತರಲ್ಲಿ, ಕ್ರೈಸ್ತರು ಈಗಲೂ ಭೂಮಿ ಗೋಲಾಕಾರವಿದೆ ಎಂದು ನಂಬುವುದಿಲ್ಲ. ಆದರೆ ಹಿಂದೂ ಧರ್ಮದ ನಂಬಿಕೆಯನ್ನು ಮೌಢ್ಯ ಎನ್ನಲಾಗುತ್ತಿದೆ. ನಂಬಿಕೆಯನ್ನು ಮೌಢ್ಯ ಎಂದರೆ ಒಪ್ಪಲಾಗದು ಎಂದು ಸರ್ಕಾರದ ವಿರುದ್ಧ ವಾಗ್ವಾದ ನಡೆಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply