Connect with us

UDUPI

ಉಡುಪಿಯಲ್ಲಿ ಧರ್ಮಸಂಸತ್ತ್ : ಅಯೋಧ್ಯೆ ರಾಮಮಂದಿರ ನಿರ್ಮಾಣದ ಚರ್ಚೆ

ಉಡುಪಿಯಲ್ಲಿ ಧರ್ಮಸಂಸತ್ತ್ : ಅಯೋಧ್ಯೆ ರಾಮಮಂದಿರ ನಿರ್ಮಾಣದ ಚರ್ಚೆ

ಉಡುಪಿ, ಅಕ್ಟೋಬರ್ 15:  ನವೆಂಬರ್ 24, 25, 26ಕ್ಕೆ ಧರ್ಮ ಸಂಸತ್ತು ಕಾರ್ಯಕ್ರಮ ಉಡುಪಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ಮಾತಾ ಅಮೃತಾನಂದಮಯಿ ಹಾಗೂ ದೇಶ ರಾಜ್ಯದ ಧಾರ್ಮಿಕ ಪ್ರಮುಖರು ಪಾಲ್ಗೊಳ್ಳಲ್ಲಿದ್ದಾರೆ .

ಈ ಸುದ್ದಿಗೋಷ್ಟಿಯಲ್ಲಿ ಮಅಹಿತಿ ನೀಡಿದ ವಿಹಿಂಪ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ ಈ ಧರ್ಮಸಂಸತ್ ನಲ್ಲಿ ಅಯೋಧ್ಯಾ ರಾಮಮಂದಿರ ನಿರ್ಮಾಣದ ಚರ್ಚೆಯಾಗಲಿದೆ. ಅಲ್ಲದೆ ಅಸ್ಪೃಷ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ ಮಂಡನೆಯಾಗಲಿದೆ. ಧರ್ಮಸಂಸತ್ತಿನಲ್ಲಿ ಸಂತರೇ ಹಲವು ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದರು. ನವೆಂಬರ್ 26 ರಂದು ರಾಜ್ಯದ ಎಲ್ಲಾ ಜಾತಿ ಪ್ರಮುಖರು ಬರುತ್ತಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ಕಡೆಗಳಿಂದ  3500 ಜಾತಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಧರ್ಮದ ಮೇಲಿನ ಆಕ್ರಮಣ ಹೆಚ್ಚಾಗಿದ್ದು, ಹಿಂದೂ ಧರ್ಮದ ಜನರಲ್ಲಿ ಜಾಗೃತಿ ನಡೆಯಲಿದೆ ಗೋಪಾಲ್ ತಿಳಿಸಿದರು.

 

Facebook Comments

comments