LATEST NEWS
ಗುಂಡಿನದಾಳಿಗೆ ಒಳಗಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ
ಜಪಾನ್ ಜುಲೈ 8: ಚುನಾವಣಾ ಭಾಷಣ ವೇಳೆ ಅಪರಿಚಿತನ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ನಿಧನರಾಗಿದ್ದಾರೆ.
ಕ್ಯೋಟೋ ಸಮೀಪದ ನಾರಾ ನಗರದಲ್ಲಿ ಶುಕ್ರವಾರ ಭಾಷಣ ಮಾಡುವಾಗ ಶಿಂಜೋ ಅಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಕುತ್ತಿಗೆ, ಎದೆಭಾಗ ಸೇರಿದಂತೆ ಭೀಕರವಾಗಿ ದಾಳಿಗೀಡಾಗಿ ರಕ್ತಸ್ರಾವವಾಗಿ ಹೃದಯ ಸ್ತಂಭನಕ್ಕೊಳಗಾಗಿದ್ದ ಶಿಂಜೊ ಅಬೆಯವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಇಂದು ಮಧ್ಯಾಹ್ನ ಜಪಾನ್ ನ ಎನ್ ಎಚ್ ಕೆ ವರ್ಲ್ಡ್ ನ್ಯೂಸ್ ಅಧಿಕೃತವಾಗಿ ಘೋಷಿಸಿದೆ.
You must be logged in to post a comment Login