Connect with us

    FILM

    ತಾಯಿಯಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಟಿಎಂಸಿ ಸಂಸದೆ ನುಸ್ರತ್ ಜಹಾನ್

    ಕೊಲ್ಕತ್ತಾ : ವೈಯುಕ್ತಿಕ ಜೀವನದಲ್ಲಿ ನಡೆದ ಘಟನೆಗಳಿಂದ ಸುದ್ದಿಯಲ್ಲಿದ್ದ ಟಿಎಂಸಿ ಸಂಸದೆ ಬೆಂಗಾಲಿ ನಟಿ ನುಸ್ರತ್ ಜಹಾನ್ ತಮ್ಮ ಚೊಚ್ಚಲ ಹೆರಿಗೆ ನಂತರ ಇದೇ ಪ್ರಥಮ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.


    ಆಗಸ್ಟ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ ನುಸ್ರತ್ ಜಹಾನ್, ಒಂದು ತಿಂಗಳ ಒಳಗೆ ಇದೀಗ ಕೆಲಸವನ್ನು ಪುನರಾಂಭಿಸಿದ್ದಾರೆ. ಈ ಮಧ್ಯೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಮಗುವಿನ ತಂದೆ ಬಗ್ಗೆ ಮಾಧ್ಯಮದ ಎದುರಿಗೆ ಮಾತನಾಡಿದ್ದಾರೆ.


    ನಿಮ್ಮ ಮಗುವನ್ನು ಯಾವಾಗ ಸಾರ್ವಜನಿಕವಾಗಿ ತೋರಿಸುತ್ತೀರಿ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನುಸ್ರತ್​ ಜಹಾನ್​, ‘ಈ ಪ್ರಶ್ನೆಯನ್ನು ನನ್ನ ಮಗುವಿನ ತಂದೆಯ ಬಳಿಯೇ ಕೇಳಬೇಕು..ಯಾಕೆಂದರೆ ಈ ಸಮಯದಲ್ಲಂತೂ ಅವರು ಹೊರಗಿನ ಯಾರಿಗೂ ಮಗುವನ್ನು ನೋಡಲು ಬಿಡುತ್ತಿಲ್ಲ’ ಎಂದು ಹೇಳಿದರು.


    ತುಂಬು ಗರ್ಭಿಣಿಯಾಗಿದ್ದ ನುಸ್ರತ್ ಜಹಾನ್​ರನ್ನು ಆಗಸ್ಟ್​ 25ರಂದು ಬೆಂಗಾಳಿ ನಟ ಯಶ್​ ದಾಸ್​​ಗುಪ್ತಾ ಕೋಲ್ಕತ್ತದ ನಿಯೋಟಾ ಆಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆಯಾದ ಬಳಿಕವೂ ಕೂಡ, ನುಸ್ರತ್​ ಮತ್ತು ಆಕೆಯ ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ನುಸ್ರತ್ ಜಹಾನ್​ 2019ರ ಜೂನ್​ 19ರಲ್ಲಿ ಟರ್ಕಿಯಲ್ಲಿ ನಿಖಿಲ್​ ಜೈನ್ ಎಂಬುವರನ್ನು ವಿವಾಹವಾಗಿದ್ದರು. ಆದರೆ 2021ರಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ ಭಾರತದ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್​​ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply