LATEST NEWS
ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ದೌರ್ಜನ್ಯ – ನೊಂದ ಶಿಕ್ಷಕ ದಂಪತಿಗಳು ನ್ಯಾಯಕ್ಕಾಗಿ ಮೊರೆ
ಪುತ್ತೂರು ಸೆಪ್ಟೆಂಬರ್ 09: ಪುತ್ತೂರು ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ಮರ,ಮರಳು ಲೂಟಿಕೋರರು ತಕರಾರು ಎತ್ತಿ ದೌರ್ಜನ್ಯ ನಡೆಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ನೊಂದ ಶಿಕ್ಷಕ ದಂಪತಿಗಳು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಕಡಬ ತಾಲೂಕಿನ ಕಾಣಿಯೂರಿನ ನಿವಾಸಿಗಳಾದ ಶಿವರಾಮ ಗೌಡ ಮತ್ತು ಬೇಬಿ ದೌರ್ಜನ್ಯಕ್ಕೊಳಗಾದವರು, ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ತಮ್ಮ ಸುರಕ್ಷತೆಗಾಗಿ ಮನೆಯ ಮುಂದೆ ವರ್ಷಗಳ ಹಿಂದೆ ಸಿಸಿ ಕ್ಯಾಮರಾ ಆಳವಡಿಸಿದ್ದರು. ಆದರೆ ಈ ಭಾಗದಲ್ಲಿ ಅಕ್ರಮವಾಗಿ ಮರ, ಮರಳು ದಂಧೆ ಹೆಚ್ಚಾಗಿ ನಡೆಯುತ್ತಿದ್ದು.
ಇವರ ಮನೆಯಲ್ಲಿ ಹಾಕಿರುವ ಸಿಸಿ ಕ್ಯಾಮರಾದಿಂದ ಅಕ್ರಮ ಬಯಲಾಗುವ ಕಾರಣಕ್ಕಾಗಿ ಸಿಸಿ ಕ್ಯಾಮರಾ ತೆಗೆಯಲು ದಂಧೆಕೋರರು ಶಿಕ್ಷಕ ದಂಪತಿಗೆ ಒತ್ತಡ ಹಾಕಿದ್ದಾರೆ. ಆದರೆ ಕ್ಯಾಮರಾ ತೆಗೆಯಲು ಇವರು ನಿರಾಕರಿಸಿದ ಕಾರಣ ದುಷ್ಕರ್ಮಿಗಳು ದಂಪತಿಗಳ ಮನೆಗೆ ನುಗ್ಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರದೇಶದಲ್ಲಿ ಸುಮಾರು 20 ಕ್ಕೂ ಮಿಕ್ಕಿದ ಮರಗಳ ಅಕ್ರಮವಾಗಿ ಕಡಿದ ಲೂಟಿಕೋರರು ಸಾಗಿಸಿದ್ದು, ಈ ಬಗ್ಗೆ ದೂರು ನೀಡಲು ಹೋದರೆ ಅರಣ್ಯ ಇಲಾಖೆ, ಪೋಲೀಸ್ ಇಲಾಖೆಯಿಂದಲೂ ಅಸಹಕಾರ ತೋರಿದ್ದರು. ಈ ಹಿನ್ನಲೆ ನೊಂದ ಶಿಕ್ಷಕ ದಂಪತಿಗಳಿಂದ ಮಾದ್ಯಮಗಳ ಮುಂದೆ ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ.