FILM
ತಾಯಿಯಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಟಿಎಂಸಿ ಸಂಸದೆ ನುಸ್ರತ್ ಜಹಾನ್
ಕೊಲ್ಕತ್ತಾ : ವೈಯುಕ್ತಿಕ ಜೀವನದಲ್ಲಿ ನಡೆದ ಘಟನೆಗಳಿಂದ ಸುದ್ದಿಯಲ್ಲಿದ್ದ ಟಿಎಂಸಿ ಸಂಸದೆ ಬೆಂಗಾಲಿ ನಟಿ ನುಸ್ರತ್ ಜಹಾನ್ ತಮ್ಮ ಚೊಚ್ಚಲ ಹೆರಿಗೆ ನಂತರ ಇದೇ ಪ್ರಥಮ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.
ಆಗಸ್ಟ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ ನುಸ್ರತ್ ಜಹಾನ್, ಒಂದು ತಿಂಗಳ ಒಳಗೆ ಇದೀಗ ಕೆಲಸವನ್ನು ಪುನರಾಂಭಿಸಿದ್ದಾರೆ. ಈ ಮಧ್ಯೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಮಗುವಿನ ತಂದೆ ಬಗ್ಗೆ ಮಾಧ್ಯಮದ ಎದುರಿಗೆ ಮಾತನಾಡಿದ್ದಾರೆ.
ನಿಮ್ಮ ಮಗುವನ್ನು ಯಾವಾಗ ಸಾರ್ವಜನಿಕವಾಗಿ ತೋರಿಸುತ್ತೀರಿ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನುಸ್ರತ್ ಜಹಾನ್, ‘ಈ ಪ್ರಶ್ನೆಯನ್ನು ನನ್ನ ಮಗುವಿನ ತಂದೆಯ ಬಳಿಯೇ ಕೇಳಬೇಕು..ಯಾಕೆಂದರೆ ಈ ಸಮಯದಲ್ಲಂತೂ ಅವರು ಹೊರಗಿನ ಯಾರಿಗೂ ಮಗುವನ್ನು ನೋಡಲು ಬಿಡುತ್ತಿಲ್ಲ’ ಎಂದು ಹೇಳಿದರು.
ತುಂಬು ಗರ್ಭಿಣಿಯಾಗಿದ್ದ ನುಸ್ರತ್ ಜಹಾನ್ರನ್ನು ಆಗಸ್ಟ್ 25ರಂದು ಬೆಂಗಾಳಿ ನಟ ಯಶ್ ದಾಸ್ಗುಪ್ತಾ ಕೋಲ್ಕತ್ತದ ನಿಯೋಟಾ ಆಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆಯಾದ ಬಳಿಕವೂ ಕೂಡ, ನುಸ್ರತ್ ಮತ್ತು ಆಕೆಯ ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ನುಸ್ರತ್ ಜಹಾನ್ 2019ರ ಜೂನ್ 19ರಲ್ಲಿ ಟರ್ಕಿಯಲ್ಲಿ ನಿಖಿಲ್ ಜೈನ್ ಎಂಬುವರನ್ನು ವಿವಾಹವಾಗಿದ್ದರು. ಆದರೆ 2021ರಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ ಭಾರತದ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು.