Connect with us

FILM

ಪ್ರೆಗ್ನೆನ್ಸಿ ಫೋಟೋ ಮೂಲಕ ಸಿಹಿ ಸುದ್ದಿ ಕೊಟ್ಟ ನಟಿ ನಮಿತಾ

ಚೆನ್ನೈ: ದಕ್ಷಿಣಭಾರತದ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಭಾರೀ ಹವಾ ಸೃಷ್ಠಿಸಿದ್ದ ನಟಿ ನಮಿತ್ ಇದೀಗ ಅಮ್ಮನಾಗುವ ಖುಷಿಯಲ್ಲಿದ್ದುಬ, ಅಮ್ಮಂದಿರ ದಿನದಂದೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ತಾವು ತಾಯಿ ಆಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಪ್ರಗ್ನೆನ್ಸಿ ಫೋಟೋವನ್ನು ಹಂಚಿಕೊಂಡಿದ್ದು, ಅಷ್ಟು ದಿನಗಳ ಕಾಯುವಿಕೆಗೆ ಫಲ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.


2017 ರಲ್ಲಿ ವೀರೇಂದ್ರ ಅವರ ಜೊತೆ ತಿರುಪತಿಯ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ತಮಿಳು ಸಿನಿಮಾದಲ್ಲಿ ನಟಿಸುವಾಗ ವೀರೇಂದ್ರ ಮತ್ತು ನಮಿತಾ ಸ್ನೇಹಿತರಾಗಿ, ಸ್ನೇಹ ಪ್ರೇಮವಾಗಿ ಆನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ವಿವಾಹವಾಗಿದ್ದರು.
ರವಿಚಂದ್ರನ್ ಜೊತೆ ನೀಲಕಂಡ, ಹೂ ಸೇರಿದಂತೆ ಹಲವು ಚಿತ್ರಗಳಲ್ಲಿ ನಮಿತಾ ನಟಿಸಿದ್ದರು. ಅಲ್ಲದೇ, ಕನ್ನಡದ ಇಂದ್ರ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದರು


ನಮಿತಾ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲೂ ಅವರು ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜತೆ ತಮಿಳಿನ ಬಿಗ್ ಬಾಸ್ ಗೂ ಹೋಗಿ ಬಂದರು. ಕೆಲ ರಿಯಾಲಿಟಿ ಶೋಗಳಿಗೂ ಅವರು ಜಡ್ಜ್ ಆಗಿ ಕೆಲಸ ಮಾಡಿದ್ದಾರೆ.

Advertisement
Click to comment

You must be logged in to post a comment Login

Leave a Reply