Connect with us

    FILM

    ಆಕಸ್ಮಿಕವಾಗಿ ತಮ್ಮದೇ ಗನ್ ನಿಂದ ಕಾಲಿಗೆ ಶೂಟ್ ಮಾಡಿಕೊಂಡ ಬಾಲಿವುಡ್ ನಟ ಗೋವಿಂದ – ಆಸ್ಪತ್ರೆಗೆ ದಾಖಲು

    ಮುಂಬೈ ಅಕ್ಟೋಬರ್ 1: ಬಾಲಿವುಡ್ ನಟ ಗೋವಿಂದ ಅವರು ತಮ್ಮದೇ ಗನ್ ನಿಂದ ಆಕಸ್ಮಿಕವಾಗಿ ಕಾಲಿಗೆ ಶೂಟ್ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.


    ಮುಂಬೈನಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಟ ಹಾಗೂ ಶಿವಸೇನಾ ಮುಖ್ಯಸ್ಥ ಗೋವಿಂದ ಕೋಲ್ಕತ್ತಾ ತೆರಳಲು ರೆಡಿ ಆಗುತ್ತಿದ್ದರು. ಅವರು ತಮ್ಮ ಪರವಾನಗಿ ಗನ್​ನ ಇಟ್ಟುಕೊಳ್ಳುತ್ತಿದ್ದರು. ಅದು ಅವರ ಕೈ ತಪ್ಪಿದ್ದು, ಬುಲೆಟ್​ ಸಿಡಿದಿದೆ. ಅವರ ಕಾಲಿಗೆ ಗುಂಡು ತಾಗಿದೆ. ವೈದ್ಯರು ಬುಲೆಟ್​ನ ತೆಗೆದಿದ್ದಾರೆ. ಅವರು ಆಸ್ಪತ್ರೆಯಲ್ಲಿ ಇದ್ದು, ಆರೋಗ್ಯ ಸ್ಥಿರವಾಗುತ್ತಿದೆ’ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ. ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್​ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply