FILM
ಚೈತ್ರಾ ಕುಂದಾಪುರಗೆ ನಾಮಿನೇಷನ್ ಶಾಕ್ – ನಾನು ಚೈತ್ರಾ ಕುಂದಾಪುರ ಅಲ್ಲ ಬರೀ ಚೈತ್ರಾ..!!
ಬೆಂಗಳೂರು ಅಕ್ಟೋಬರ್ 01:ಕಲರ್ಸ್ ಕನ್ನಡದಲ್ಲಿ ಪ್ರಾರಂಭವಾಗಿರುವ ಬಿಗ್ ಬಾಸ್ ಸೀಸನ್ 11 ಈಗಾಗಲೇ ಟ್ರೆಂಡಿಂಗ್ ನಲ್ಲಿದೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಕುಂದಾಪುರ ವಿರುದ್ದ ಸ್ವರ್ಗ ನಿವಾಸಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರ ಮೊದಲ ದಿನದಿಂದಲೇ ತಮ್ಮ ಆಟ ಪ್ರಾರಂಭಿಸಿದ್ದಾರೆ. ಚೈತ್ರಾ ಪಕ್ಕಾ ಬಿಗ್ ಬಾಸ್ ಇಂಚಿಂಚು ಮಾಹಿತಿ ಇಟ್ಟುಕೊಂಡೆ ಆಟಕ್ಕೆ ಇಳಿದಿದ್ದಾರೆ. ಈ ನಡುವೆ ಮೊದಲವಾರದ ನಾಮಿನೇಷನ್ ಗೆ ಸ್ವರ್ಗ ನಿವಾಸಿಗಳಿಗೆ ನರಕ ನಿವಾಸಿಗಳನ್ನು ನಾಮಿನೇಟ್ ಮಾಡಲು ಅವಕಾಶ ಸಿಕ್ಕಿತ್ತು. ಈ ವೇಳೆ ಬಹುತೇಕ ಸ್ವರ್ಗ ನಿವಾಸಿಗಳು ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಅವರ ನೀಡಿದ ಕಾರಣಗಳಿಗೆ ತಮ್ಮದೇ ಶೈಲಿಯಲ್ಲಿ ಚೈತ್ರಾ ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆ ಅವರು ನಾನು ಚೈತ್ರಾ ಆಗಿ ಬಂದಿದ್ದೇನೆ ಹೊರತು ಚೈತ್ರಾ ಕುಂದಾಪರ ಅಲ್ಲ ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಬಿಗ್ ಬಾಸ್ ಇಂಚಿಂಚೂ ಮಾಹಿತಿ ಇಟ್ಟಕೊಂಡೆ ಬಂದಂತಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ತಮ್ಮ ಹವಾ ಇಟ್ಟುಕೊಂಡಿದ್ದಾರೆ.
You must be logged in to post a comment Login