Connect with us

    KARNATAKA

    ನವರಾತ್ರಿಗೆ ಕೇಂದ್ರದಿಂದ ಶಾಕ್,LPG ಸಿಲಿಂಡರ್ ಬೆಲೆ 48.50 ರೂ. ಹೆಚ್ಚಳ..!!

    ಹೊಸದಿಲ್ಲಿ : ನವರಾತ್ರಿ ಸೇರಿ ಸಾಲು ಸಾಲು ಹಬ್ಬಗಳ ಸಂದರ್ಭ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದ್ದು 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂ. ಹೆಚ್ಚಿಸಿದೆ.

    19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿ ನವರಾತ್ರಿ ಹೊತ್ತಲ್ಲಿ ಗ್ರಾಹಕರಿಗೆ ತೈಲ ಮಾರುಕಟ್ಟೆ ಕಂಪನಿಗಳು ಶಾಕ್ ನೀಡಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂ. ಹೆಚ್ಚಿಸಲಾಗಿದೆ. ದಿಲ್ಲಿಯಲ್ಲಿ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1740 ರೂ ಆಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಕ್ಟೋಬರ್ 1, 2024ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಮುಂಬೈನಲ್ಲಿ ರೂ 1692.50, ಕೋಲ್ಕತ್ತಾದಲ್ಲಿ 1850.50 ರೂ. ಮತ್ತು ಚೆನ್ನೈನಲ್ಲಿ 1903 ರೂ.ಇದೆ. ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 48.50 ರೂಪಾಯಿ ಬೆಲೆ ಏರಿಕೆಯಾಗಿದ್ದು 1,818 ರೂಪಾಯಿಗೆ ತಲುಪಿದೆ. ಬೆಲೆ ಪರಿಷ್ಕರಣೆಗೂ ಮೊದಲು 19 ಕೆಜಿ ಪ್ರತಿ ಸಿಲಿಂಡರ್‌ಗೆ 1,769.50 ರೂಪಾಯಿ ಇತ್ತು. ಕಳೆದ ಸೆಪ್ಟೆಂಬರ್‌ನಲ್ಲಿಯೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಸುಮಾರು 39 ರೂ.ಗಳಷ್ಟು ಏರಿಕೆಯಾಗಿತ್ತು. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯ ಹೆಚ್ಚಳದಿಂದಾಗಿ, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಧಾಬಾಗಳ ಆಹಾರ ದರಗಳ ಮೇಲೆ ಪರಿಣಾಮವಾಗಬಹುದು. ಸೆಪ್ಟೆಂಬರ್‌ ಮತ್ತು ಆಗಸ್ಟ್‌ನಲ್ಲಿಯೂ ಬೆಲೆ ಏರಿಕೆಯಾಗಿತ್ತು. ಸೆಪ್ಟೆಂಬರ್ ನಲ್ಲಿ 39 ರೂ., ಆಗಸ್ಟ್ ನಲ್ಲಿ 8-9 ರೂ. ಏರಿಕೆಯಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply