ಬಂಟ್ವಾಳ – ಸ್ವಂತ ಮಗಳ ಮೇಲೆ ಅಪ್ಪನಿಂದ ನಿರಂತರ ಅತ್ಯಾಚಾರ

ಪುತ್ತೂರು ಎಪ್ರಿಲ್ 6: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿರುವ ಘಟನೆ ಬಂಟ್ವಾಳದ ಕುಕ್ಕಾಜೆ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಕುಕ್ಕಾಜೆ ನಿವಾಸಿ ದಾವೂದ್ ಎಂದು ಗುರುತಿಸಲಾಗಿದೆ.

ಸಂತ್ರಸ್ಥೆ ಬಾಲಕಿಯ ಮೇಲೆ ಆಕೆಯ ಅಕ್ಕನ ಗಂಡ ಅತ್ಯಾಚಾರ ಎಸಗಿದ್ದು , ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಚೈಲ್ಡ್ ಲೈನ್ ಅವರು ಸಂತ್ರಸ್ಥೆಯನ್ನು ವಿಚಾರಣೆ ನಡೆಸಿದಾಗ ಆಕೆಯ ತಂದೆ ಕೂಡ ಅತ್ಯಾಚಾರ ಎಸಗಿರುವ ಆಘಾತಕಾರಿ ವಿಷಯ ಹೊರ ಬಂದಿದೆ.

ವೃತ್ತಿಯಲ್ಲಿ ಚಾಲಕನಾಗಿರುವ ದಾವೂದ್ ಗೆ ನಾಲ್ಕು ಮದುವೆಯಾಗಿದ್ದು, 2ನೇ ಪತ್ನಿಯ ಮಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಆರೋಪಿ ದಾವೂದ್ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Facebook Comments

comments