Connect with us

LATEST NEWS

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೇಸ್ ಅಭ್ಯರ್ಥಿ

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೇಸ್ ಅಭ್ಯರ್ಥಿ

ಮಂಗಳೂರು ಎಪ್ರಿಲ್ 6: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಪರ ಕೊಣಾಜೆ ಪರಿಸರದಲ್ಲಿ ಪರಿಸರದಲ್ಲಿ ಮತ ಯಾಚಿಸಿದರು.

ದ್ವಿಚಕ್ರ ವಾಹನದಲ್ಲಿ ಯು.ಟಿ.ಖಾದರ್ ಸವಾರರಾಗಿ ಹಾಗೂ ಮಿಥುನ್ ರೈ ಸಹ ಸವಾರರಾಗಿ ಪ್ರಯಾಣಿಸುವ ಮೂಲಕ ಪಾವೂರು, ಹರೆಕಳದ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಸುವ ಮೂಲಕ ರೋಡ್ ಶೋ ನಡೆಸಿದರು.

ಆದರೆ ರೋಡ್ ನಲ್ಲಿ ಶೋ ನಡೆಸುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಹಾಕದೆ ಇಬ್ಬರು ಕಾನೂನು ಮುರಿದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸವಾರ ಹಾಗೂ ಸಹ ಸವಾರ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದರೂ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೇ ಕಾನೂನು ಮುರಿಯುವ ಪ್ರಯತ್ನ ರಾಜಾರೋಷವಾಗಿ ನಡೆಸಿರುವುದು ಸಾರ್ವಜನಿಕ ಆಕ್ರೋಶ ಕ್ಕೆ ಕಾರಣವಾಗಿದೆ.

ಇತರರಿಗೆ ಕಾನೂನು, ನೀತಿ ನಿಯಮಗಳ ಬಗ್ಗೆ ಪಾಠ ಹೇಳುವ ಸಚಿವರ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ.

Facebook Comments

comments